ಶ್ರೀರಾಮನ ಬಗ್ಗೆ ಮಾತನಾಡಿದರೆ, ನೆಲದ ಒಳಗೆ ಹೋಗುತ್ತಾರೆ | ಸಚಿವ ಈಶ್ವರಪ್ಪ ಹೇಳಿಕೆ - Mahanayaka

ಶ್ರೀರಾಮನ ಬಗ್ಗೆ ಮಾತನಾಡಿದರೆ, ನೆಲದ ಒಳಗೆ ಹೋಗುತ್ತಾರೆ | ಸಚಿವ ಈಶ್ವರಪ್ಪ ಹೇಳಿಕೆ

19/02/2021

ರಾಯಚೂರು: ಗೋವಿನ ಬಗ್ಗೆ ಮಾತನಾಡಿದ್ದಕ್ಕೆ ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೆಸ್ ಸರ್ಕಾರ ನೆಲಕಚ್ಚಿತ್ತು. ಈಗ ಶ್ರೀರಾಮನ ಬಗ್ಗೆ ಮಾತನಾಡಿದರೆ, ನೆಲದ ಒಳಗೆ ಹೋಗುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಗೋರಕ್ಷಕರನ್ನು ಕೊಲೆ ಮಾಡಿದವರ ರಕ್ಷಣೆಯನ್ನು ಸಿದ್ದರಾಮಯ್ಯ ಮಾಡಿದ್ದರು. ಗೋಮಾತೆ ಶಾಪದಿಂದಲೇ ಸಿದ್ದರಾಮಯ್ಯ ಸರ್ಕಾರ ಕಳೆದುಕೊಂಡ್ರು, ಚಾಮುಂಡೇಶ್ವರಿ ಕ್ಷೇತ್ರ ಸೋತ್ರು, ಆದ್ರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

ರಾಮ ಮಂದಿರ ನಿರ್ಮಾಣದ ಲೆಕ್ಕ ಕೇಳಲು  ಸಿದ್ದರಾಮಯ್ಯ ಯಾವನು ಎಂದು ಈಶ್ವರಪ್ಪ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರಲ್ಲದೇ ‘ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಗೌರವವಿಲ್ಲದೆ ವಿವಾದಿತ ಸ್ಥಳ ಎಂದು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧಅವರು ಹರಿಹಾಯ್ದಿದ್ದಾರೆ.

ಇತ್ತೀಚಿನ ಸುದ್ದಿ