ಡಾ.ರಮಣರಾವ್ ಸ್ವಾರ್ಥಕ್ಕೆ ಪುನೀತ್ ರಾಜ್ ಕುಮಾರ್ ಬಲಿ | ಡಾ.ರಾಜ್ ಕುಮಾರ್ ಸೇನೆ ಆಕ್ರೋಶ - Mahanayaka
6:17 AM Thursday 12 - December 2024

ಡಾ.ರಮಣರಾವ್ ಸ್ವಾರ್ಥಕ್ಕೆ ಪುನೀತ್ ರಾಜ್ ಕುಮಾರ್ ಬಲಿ | ಡಾ.ರಾಜ್ ಕುಮಾರ್ ಸೇನೆ ಆಕ್ರೋಶ

puneeth rajkumar
05/11/2021

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಮೂಲ್ಯ ಜೀವ ಬಲಿಯಾಗಲು ಡಾ.ರಮಣರಾವ್ ಅವರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅವರ ಸ್ವಾರ್ಥದಿಂದಾಗಿ  ಪುನೀತ್ ರಾಜ್ ಕುಮಾರ್ ಬಲಿಯಾಗಿದ್ದಾರೆ ಎಂದು  ಡಾ.ರಾಜ್ ಕುಮಾರ್ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಸದಾಶಿವ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಡಾ.ರಾಜ್ ಕುಮಾರ್ ಸೇನೆ ಡಾ.ರಮಣರಾವ್ ನಿರ್ಲಕ್ಷ್ಯದಿಂದಾಗಿ ಪುನೀತ್ ರಾಜ್ ಕುಮಾರ್ ಅವರು ಸಾವಿಗೀಡಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ  ಡಾ.ರಮಣರಾವ್ ಅವರು ಪುನೀತ್  ಅವರ ಪ್ರಾಣವನ್ನು ಬಲಿಕೊಟ್ಟಿದ್ದಾರೆ. ಅವರನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ರಮಣರಾವ್ ಕ್ಲಿನಿಕ್ ಬಂದ್ ಮಾಡಿಸುವವರೆಗೂ ನಾವು ಪ್ರತಿಭಟಿಸುತ್ತೇವೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪುನೀತ್ ಸಾವಿನಲ್ಲಿ ಡಾ.ರಮಣರಾವ್ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ರಮಣರಾವ್ ಅವರ ಕ್ಲಿನಿಕ್ ನ ಪಕ್ಕದಲ್ಲಿಯೇ ರಾಮಯ್ಯ ಆಸ್ಪತ್ರೆ ಇದ್ದು, ಪುನೀತ್ ರಾಜ್ ಕುಮಾರ್ ಅವರನ್ನು ತಕ್ಷಣವೇ ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು. ಆದರೆ, ವಿಕ್ರಂ ಆಸ್ಪತ್ರೆಯಲ್ಲಿ ರಮಣರಾವ್ ಅವರ ಮಗ ವೈದ್ಯನಾಗಿದ್ದು, ತನ್ನ ಮಗನಿಗೆ ರೋಗಿಯನ್ನು ನೀಡುವ ಸ್ವಾರ್ಥದಿಂದ ರಾಮಯ್ಯ ಆಸ್ಪತ್ರೆಗೆ ಕಳುಹಿಸದೇ ಅವರು ನೇರವಾಗಿ ವಿಕ್ರಂ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪುನೀತ್ ರಾಜ್ ಕುಮಾರ್ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನುವುದು ತಿಳಿದಿದ್ದರೂ ಕೂಡ ಅವರನ್ನು ಆಂಬುಲೆನ್ಸ್ ನಲ್ಲಿ ಕಳುಹಿಸದೇ, ಕಾರಿನಲ್ಲಿಯೇ ಕಳುಹಿಸಲಾಗಿದೆ. ಟ್ರಾಫಿಕ್ ಜಾಮ್ ನಲ್ಲಿ ಹೋಗುವ ಸಂದರ್ಭದಲ್ಲಿ  ಪುನೀತ್ ರಾಜ್ ಕುಮಾರ್ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಇದೆಕ್ಕೆಲ್ಲ ಮುಖ್ಯ ಕಾರಣ ಡಾ.ರಮಣರಾವ್ ಆಗಿದ್ದು, ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಸೇನೆಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ