ಅವಮಾನಿಸುವುದು ನಿಲ್ಲಿಸಿ, ರಮಾನಾಥ ರೈ ಗೆಲ್ಲುವುದು ಶತಸಿದ್ದ: ಉಮೇಶ್ ದಂಡಕೆರೆ ಸವಾಲು
ಮಂಗಳೂರು: ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಮಾಜಿ ಸಚಿವ ರಮಾನಾಥ ರೈಯವರನ್ನು ಅವಮಾನಿಸಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಗೆಲ್ಲುವುದು ಶತಸಿದ್ದ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೆರೆ ಸವಾಲ್ ಹಾಕಿದ್ದಾರೆ.
ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಕೃಷ್ಣ ಅವರು ಕಾಂಗ್ರೆಸ್ ನಲ್ಲಿದ್ದಾಗ ನಳೀನ್, ಬಿಜೆಪಿಯನ್ನು ದೂರುತ್ತಿದ್ದರು. ಇದೀಗ ಬಿಜೆಪಿಗೆ ಹೋಗಿ ರಮಾನಾಥ ರೈಯವರನ್ನು ಸುಖಾಸುಮ್ಮನೇ ಎಳೆದು ತಂದು ಅವಮಾನಿಸುತ್ತಿದ್ದಾರೆ ಎಂದಿ ಆಕ್ರೋಶ ವ್ಯಕ್ತಪಡಿಸಿದರು.
ರಮಾನಾಥ ರೈ ಮಾಡಿದಷ್ಟು ಕೆಲಸವನ್ನು ಈಗಿನ ಬಂಟ್ವಾಳ ಶಾಸಕರು ಶೇಕಡ ಹತ್ತರಷ್ಟು ಮಾಡಿದ್ದಾರೆ. ಮಾಜಿ ಆದ್ರೂ ರಮಾನಾಥ ರೈ ಅವರು ಈಗಲೂ ದಿನಾಲೂ ಚುರುಕಿನಿಂದ ಕೆಲ್ಸ ಮಾಡ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ಗೆಲುವು ಶತಸಿದ್ದ ಅಂದ್ರು. ಇನ್ನಾದ್ರೂ ಹರಿಕೃಷ್ಣರು ಬೇಕಾಬಿಟ್ಟಿ ಹೇಳಿಕೆ ಕೊಡುವುದನ್ನು, ಅವಮಾನಿಸುವುದನ್ನು ನಿಲ್ಲಿಸಲಿ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka