ರಮೇಶ್ ಜಾರಕಿಹೊಳಿಯ ದೃಶ್ಯ ಮಾತ್ರವಲ್ಲ, ಮಾತು ಕೂಡ ಅಶ್ಲೀಲ | ಕಾಂಗ್ರೆಸ್ ತಿರುಗೇಟು

congress
27/03/2021

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಬಗ್ಗೆ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ಸಂಬಂಧ ಕಾಂಗ್ರೆಸ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ಇದು ಬಿಜೆಪಿ ಸಂಸ್ಕೃತಿ ಬಿಂಬಿಸುವ ಹೇಳಿಕೆಯಾಗಿದೆ ಎಂದು ಟ್ವೀಟ್ ಮಾಡಿದೆ.

ರಮೇಶ್ ಜಾರಕಿಹೊಳಿಯ ದೃಶ್ಯ ಮಾತ್ರವಲ್ಲ, ಮಾತು ಕೂಡ ಅಶ್ಲೀಲ ಎಂದು ಕಾಂಗ್ರೆಸ್ ಹೇಳಿದ್ದು, ರಮೇಶ್ ಜಾರಕಿಹೊಳಿ ಬಿಜೆಪಿಯ ಸಂಸ್ಕೃತಿಯನ್ನು ಬಿಂಬಿಸುವ ದೊಡ್ಡದೊಡ್ಡ ಮಾತುಗಳನ್ನಾಡಿದ್ದಾರೆ ಇದು ಹೊಲಸುತನದ ಪರಮಾವಧಿ ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಅಂತಹ ಪದಗಳು ಬಿಜೆಪಿಯವರ ಬಾಯಿಯಲ್ಲಿ ಮಾತ್ರವೇ ಬರಲು ಸಾಧ್ಯ, ಕೇಸ್ ದಾಖಲಾಗಿದ್ದರೂ ಆರೋಪಿಯನ್ನು ಬಂಧಿಸದೇ ಗೃಹಸಚಿವ ಬಸವರಾಜ್ ಬೊಮ್ಮಾಯಿ ಕೀಳು ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸಿಡಿ ಪ್ರಕರಣ: ಮೂರನೇ ವಿಡಿಯೋ ಬಿಡುಗಡೆ | ಸುಧಾಕರ್ ಹೇಳಿದ್ದೇನು?

ಇತ್ತೀಚಿನ ಸುದ್ದಿ

Exit mobile version