ರಮೇಶ್ ಜಾರಕಿಹೊಳಿ ಸಿಡಿಯಲ್ಲಿದ್ದ ಲೇಡಿಯ ಬಗ್ಗೆ ಮಹತ್ವದ ಸುಳಿವು
10/03/2021
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಲಭ್ಯವಾಗಿದ್ದು, ಸಿಡಿಯಲ್ಲಿರುವ ಯುವತಿಯ ಬಗ್ಗೆ ಪೊಲೀಸರಿಗೆ ಸುಳಿವು ಲಭ್ಯವಾಗಿದೆ.
ಮಾರ್ಚ್ 2ರಂದು ವಿಡಿಯೋದಲ್ಲಿದ್ದ ಯುವತಿ ಬ್ಯಾಗ್ ಹಿಡಿದು ಮನೆಯಿಂದ ಹೊರಹೋಗಿರುವ ಸಿಸಿ ಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಮಾರ್ಚ್ 2ರಂದು ರಾತ್ರಿ ಸುಮಾರು 9:30ರ ವೇಳೆಗೆ ಯುವತಿ ತೆರಳಿರುವುದು ಪತ್ತೆಯಾಗಿದೆ.
ಇನ್ನೂ ಯುವತಿ ಮನೆಯಿಂದ ಹೊರಹೋಗುವುದಕ್ಕೂ ಮೊದಲು ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಯುವತಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡುವುದಕ್ಕೂ ಮೊದಲು ಯಾರಿಗೆಲ್ಲ ಕರೆ ಮಾಡಿದ್ದಾಳೆ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.