ರಮೇಶ್ ಜಾರಕಿಹೊಳಿ ಸಿಡಿಯಲ್ಲಿದ್ದ ಯುವತಿಯ ಕಿಡ್ನಾಪ್! - Mahanayaka
1:53 AM Wednesday 11 - December 2024

ರಮೇಶ್ ಜಾರಕಿಹೊಳಿ ಸಿಡಿಯಲ್ಲಿದ್ದ ಯುವತಿಯ ಕಿಡ್ನಾಪ್!

16/03/2021

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರೆತಿದ್ದು ಸಂತ್ರಸ್ತ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿಡಿಯಲ್ಲಿದ್ದ ಯವತಿಯ ತಂದೆ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು,  ನನ್ನ ಮಗಳು ಬೆಂಗಳೂರು ಹಾಸ್ಟೆಲ್ ನಲ್ಲಿದ್ದಾಗ ಕಿಡ್ನಾಪ್ ಆಗಿದ್ದಾಳೆ ಎಂದು ದೂರು ನೀಡಿದ್ದಾರೆ.

ನನ್ನ ಮಗಳನ್ನು ಅಪಹರಿಸಲಾಗಿದ್ದು, ಬಳಿಕ ಬೆದರಿಸಿ ಅಶ್ಲೀಲ ಸಿಡಿ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ಸಂತ್ರಸ್ತೆಯ ತಂದೆ  ಪೊಲೀಸರಿಗೆ  ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಸ್ ಐಟಿ ಪೊಲೀಸರು ತನಿಖೆ ಚುರುಕುಗೊಳಿಸಿರುವುದರ ನಡುವೆಯೇ ಇದೀಗ ನಾನಾ ತಿರುವುಗಳು ಕಂಡು ಬಂದಿವೆ.

ಯುವತಿಯ ಸಿಡಿ ಬಿಡುಗಡೆಯಾಗಿ ಇಷ್ಟು ದಿನವಾದರೂ ಯುವತಿ ಪತ್ತೆಯಾಗಿಲ್ಲ. ಇದೀಗ ದಿಢೀರನೇ ಯುವತಿಯ ತಂದೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿರುವಾಗಲೇ ಯುವತಿಯನ್ನು ಅಪಹರಿಸಲಾಗಿತ್ತು ಎಂದು ತಂದೆ ಹೇಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರು ಯಾಕೆ ದೂರು ಸಲ್ಲಿಸಿಲ್ಲ ಎಂಬ ಪ್ರಶ್ನೆಯನ್ನು ಪೊಲೀಸರು ಕೇಳುವ ಸಾಧ್ಯತೆಗಳಿವೆ. ಇನ್ನೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರೂ ಯುವತಿಯ ತಂದೆಗೆ ತಿಳಿಯಲಿಲ್ಲವೇ ಎಂಬ ಬಗೆ ನಾನಾ ಪ್ರಶ್ನೆಗಳು ಪೊಲೀಸರ ಮುಂದೆಯೂ ಇದೆ. ಅಂತೂ ಈ ಸಿಡಿ ಪ್ರಕರಣ ಎಲ್ಲಿಂದ ಆರಂಭವಾಗಿದೆ? ಎಲ್ಲಿ ಹೋಗಿ ಅಂತ್ಯವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ