ರಮೇಶ್ ಜಾರಕಿಹೊಳಿ ಐಸಿಯುನಲ್ಲಿರುವ ವಿಡಿಯೋ ಬಿಡುಗಡೆ!
05/04/2021
ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯ ನಡುವೆಯೇ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆದರೆ ಈ ಬಗ್ಗೆ ಸಿಡಿ ಪ್ರಕರಣದ ಸಂತ್ರಸ್ತೆಯ ವಕೀಲ ಜಗದೀಶ್, ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿರುವುದು ಅನುಮಾನ ಎಂದು ಹೇಳಿದ್ದರು.
ಇದೀಗ ರಮೇಶ್ ಜಾರಕಿಹೊಳಿ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರು ಸುಳ್ಳು ಆರೋಪ ಮಾಡಬಾರದು ಎಂದು ವೈದ್ಯ ರವೀಂದ್ರ ಅಂಟಿನ್ ಮನವಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ದೂರು ನೀಡಿದ ಬಳಿಕ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಲೇ ಹೋಗಿತ್ತು. ಇದೀಗ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಎಂಬ ವಿಚಾರದಲ್ಲಿ ಇದೀಗ ಅನುಮಾನಗಳು ಸಹಜವಾಗಿ ಮೂಡಿದೆ. ಆದರೆ, ಈ ನಡುವೆ ರಮೇಶ ಜಾರಕಿಹೊಳಿ ಪಿಪಿಇ ಕಿಟ್ ಹಾಕಿಹೊಂಡು ಮಲಗಿರುವ ವಿಡಿಯೋ ಕಳುಹಿಸುವ ಮೂಲಕ ಮತ್ತೊಂದು ತಿರುವು ನೀಡಿದ್ದಾರೆ.