ವಿಡಿಯೋ ನೋಡಿ ರಮೇಶ್ ಜಾರಕಿಹೊಳಿಯ ಮಚ್ಚೆ ಕಾಣಿಸುತ್ತಿಲ್ಲ ಎಂದ ಶಾಸಕ!
06/03/2021
ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಬಿಡುಗಡೆಯಾದ ವಿಡಿಯೋದಲ್ಲಿ ರಮೇಶ್ ಜಾರಕಿ ಹೊಳಿ ಅವರ ಕತ್ತಿನ ಬಳಿ ಇರುವ ಮಚ್ಚೆ ಕಾಣಿಸುತ್ತಿಲ್ಲ. ಈ ವಿಡಿಯೋ ಫೇಕ್ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.
ಸದಾಶಿವ ನಗರದಲ್ಲಿರುವ ಜಾರಕಿಹೊಳಿಯವರ ಭಾಗ್ಯ ಲಕ್ಷ್ಮೀ ನಿವಾಸಕ್ಕೆ ಆಗಮಿಸಿದ್ದ ಮಹೇಶ್ ಕುಮಟಳ್ಳಿ, ಈ ಘಟನೆ ನೋಡಿ ನಮಗೆ ಆಶ್ಚರ್ಯವಾಯಿತು. ಜಾರಕಿಹೊಳಿ ಒಬ್ಬ ದೈವ ಭಕ್ತರು, ಇವರಿಗೆ ಏನಾಗಿದೆ? ಇದು ನಿಜವೇ ಸುಳ್ಳೇ? ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ವಿಡಿಯೋವನ್ನು ಗಮನಿಸಿದಾಗ ಇದು ಪೂರ್ವ ನಿಯೋಜಿತ ಕೃತ್ಯದಂತೆ ಕಂಡು ಬರುತ್ತಿದೆ ಎಂದು ಅವರು ಹೇಳಿದರು.
ಈ ದೃಶ್ಯವನ್ನು ಯಾರು ಚಿತ್ರಿಸಿ ದ್ದಾರೆ ಎನ್ನುವುದು ತನಿಖೆಯಾಗಬೇಕು ಈ ವಿಡಿಯೋ ಗಮನಿಸಿದರೆ, ವಿಡಿಯೋವನ್ನು ಎಡಿಟ್ ಮಾಡಿರುವಂತೆ ಕಂಡು ಬರುತ್ತಿದೆ. ರಮೇಶ್ ಜಾರಕಿಹೊಳಿ ಅವರ ಕುಟುಂಬದ ನೋವಿಗೆ ಯಾರು ಬೆಲೆ ಕಟ್ಟುತ್ತಾರೆ ಎಂದು ಮಹೇಶ್ ಪ್ರಶ್ನಿಸಿದರು.