ರಮೇಶ್ ಜಾರಕಿಹೊಳಿ ವಿಡಿಯೋ ರಷ್ಯಾದಿಂದ ಅಪ್ ಲೋಡ್ ಮಾಡಲಾಗಿದೆ? - Mahanayaka

ರಮೇಶ್ ಜಾರಕಿಹೊಳಿ ವಿಡಿಯೋ ರಷ್ಯಾದಿಂದ ಅಪ್ ಲೋಡ್ ಮಾಡಲಾಗಿದೆ?

04/03/2021

ಬೆಂಗಳೂರು: ರಮೇಶ್ ಜಾರಕಿಹೊಳಿಯ ವಿಡಿಯೋ ರಷ್ಯಾದಿಂದ ಅಪ್ ಲೋಡ್ ಮಾಡಲಾಗಿದೆ. ಎಂದು ಹೇಳಲಾಗುತ್ತಿದ್ದು, ಮಂಗಳವಾರ ಮಧ್ಯಾಹ್ನ 2:20ರ ವೇಳೆಗೆ ರಷ್ಯಾದಿಂದ ವಿಡಿಯೋ ಅಪ್ ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಸಂಬಂಧ ಪೊಲೀಸರು ಯೂಟ್ಯೂಬ್ ಗೆ ಪತ್ರ ಬರೆದು ಮತ್ತಷ್ಟು ವಿವರಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ. ೀ ಬಗ್ಗೆ ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರುದಾರ ದಿನೇಶ್ ಕಲ್ಲಹಳ್ಳಿ ಕೂಡ ಪೊಲೀಸರಿಗೆ ಸಂತ್ರಸ್ತೆಯ ವಿಳಾಸ ಮತ್ತು ಇತರ ಮಾಹಿತಿಗಳನ್ನು ನೀಡಿಲ್ಲ ಎಂದು ಹೇಳಲಾಗುತ್ತಿದೆ. ಕಲ್ಲಹಳ್ಳಿ ಇಂದು ಪೊಲೀಸರ ವಿಚಾರಣೆಗೊಳಪಡಲಿದ್ದಾರೆ.

ಈ ವಿಡಿಯೋದ ಮೂಲ ಎಲ್ಲಿಯದ್ದು? ವಿಡಿಯೋ ಕೊಟ್ಟದ್ದು ಯಾರೂ? ವಿಡಿಯೋ ಮಾಡಿದ್ದು ಯಾರು? ಎನ್ನುವ ಯಾವುದೇ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹರಿಯಬಿಡಲಾಗಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗಳು ಸದ್ಯ ಕೇಳಿ ಬಂದಿದೆ.

whatsapp

ಇತ್ತೀಚಿನ ಸುದ್ದಿ