“ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿರುವುದೇ ಅನುಮಾನ” - Mahanayaka

“ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿರುವುದೇ ಅನುಮಾನ”

jagadeesh
05/04/2021

ಬೆಂಗಳೂರು: ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿರುವುದು ಅನುಮಾನ, ಅವರು ಕೊರೊನಾ ಆಸ್ಪತ್ರೆಯಲ್ಲಿಯೇ ಇಲ್ಲ ಎಂದು ಸಿಡಿ ಪ್ರಕರಣದ ಸಂತ್ರಸ್ತೆ ಪರ ವಕೀಲ ಜಗದೀಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಮುಂದೆಯೇ ಬೆಳಗಾವಿ ವಕೀಲರಾದ ಚಂದನ್ ಗಿಡ್ನಾವರ್ ಅವರೊಂದಿಗೆ ಅವರು ಫೋನ್ ನಲ್ಲಿ ಮಾತನಾಡಿದ್ದು,  ಈ ವೇಳೆ ಆಸ್ಪತ್ರೆಯಲ್ಲಿ ಚಂದನ್ ಅವರು ವಿಚಾರಿಸಿದಾಗ  ವೈದ್ಯರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆರೋಪಿ ರಮೇಶ್ ಜಾರಕಿಹೊಳಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಆರೋಪಿ ಕೊವಿಡ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ನಮ್ಮ ಸ್ಥಳೀಯ ವಕೀಲರು ಮಾಹಿತಿ ನೀಡಿದ್ದಾರೆ. ಆರೋಪಿಗೆ ಕೊರೊನಾ ಬಂದಿರುವುದು ಅನುಮಾನ ಎಂದು ಜಗದೀಶ್ ಹೇಳಿಕೆ ನೀಡಿದ್ದಾರೆ.


Provided by

ಇತ್ತೀಚಿನ ಸುದ್ದಿ