ರಣರಂಗವಾದ ಬಿಗ್ ಬಾಸ್ ಮನೆ: ಲೋಕಿ ಜೊತೆಗೆ ಆರ್ಯವರ್ಧನ್ ಗುರೂಜಿ ಜಟಾಪಟಿ - Mahanayaka

ರಣರಂಗವಾದ ಬಿಗ್ ಬಾಸ್ ಮನೆ: ಲೋಕಿ ಜೊತೆಗೆ ಆರ್ಯವರ್ಧನ್ ಗುರೂಜಿ ಜಟಾಪಟಿ

voot
08/08/2022

ಬಿಗ್ ಬಾಸ್ ಒಟಿಟಿ ಸೀಸನ್ 1 ದಿನದಿಂದ ದಿನಕ್ಕೆ ರಂಗೇರುತ್ತಲೇ ಹೋಗುತ್ತಿದೆ.  ಬಿಗ್ ಬಾಸ್ ನಲ್ಲಿ ಗೆಲುವು ಸಾಧಿಸಲು ಆರಂಭದಲ್ಲೇ ಒಬ್ಬರ ಮೇಲೊಬ್ಬರು ಹರಿಹಾಯ್ದು ಕಾದಾಟಕ್ಕೆ ನಿಂತಿದ್ದಾರೆ.

ತನ್ನ ಜೀವನದ ಅನುಭವದ ಬಗ್ಗೆ  ಲೋಕಿ ವಿವರಿಸುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಆರ್ಯವರ್ಧನ್ ಗುರೂಜಿ, ನೀವು ಓಟು ಗಿಟ್ಟಿಸಿಕೊಳ್ಳಲು ಇಲ್ಲದ್ದೆಲ್ಲ ಮಾತನಾಡಬೇಡಿ ಎಂದು ಖ್ಯಾತೆ ತೆಗೆದಿದ್ದಾರೆ.

ಸುಮಾರು ವರ್ಷಗಳ ವರೆಗೆ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್ಕೇ ನನ್ನಮ್ಮ  ಎಂದು ಲೋಕಿ ಹೇಳಿದ್ದು, ಆದರೆ ಇದು ಓಟು ಪಡೆದುಕೊಳ್ಳಲು ಲೋಕಿ ಮಾಡ್ತಿರೋ ತಂತ್ರ ಎಂದು ಆರ್ಯವರ್ಧನ್ ಮಧ್ಯೆ ವಿವಾದ ಸೃಷ್ಟಿಸುತ್ತಾರೆ.


Provided by

ಗುರೂಜಿಯ ಸ್ವಭಾವದಿಂದ  ನೊಂದ  ಲೋಕಿ, ಹಾಗಿದ್ರೆ, ನಾನಿಲ್ಲಿ ನಿಂತು ಓಟಿಗಾಗಿ ಮಾತನಾಡುತ್ತಿದ್ದೇನಾ? ಎಂದು ಲೋಕಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮುಂದೇನಾಗುತ್ತದೆ, ಚರ್ಚೆ ಎಲ್ಲಿ ನಿಲ್ಲುತ್ತದೆ ಅನ್ನೋದನ್ನ ನೀವೇ ವೂಟ್ ಮೂಲಕ ನೋಡಬಹುದಾಗಿದೆ.  ಬಿಗ್ ಬಾಸ್ ಒಟಿಟಿ ಕುತೂಹಲ ಹಾಗೂ ಸ್ವಾರಸ್ಯಕರವಾಗಿ ಮನರಂಜನೆ ನೀಡುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ