ಮಂಗಳಮುಖಿಯರಿಂದ ‘ರಂಡೆ ಹುಣ್ಣಿಮೆ’ವಿಶೇಷ ಆಚರಣೆ: ಏನಿದರ ವಿಶೇಷತೆ?
ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ಇವರನ್ನು ‘ತೃತೀಯ ಲಿಂಗಿ’ ಅಥವಾ ‘ಮಂಗಳಮುಖಿ’ ಎಂದೂ ಕರೆಯುತ್ತಾರೆ. ಅನ್ಯಧರ್ಮದಲ್ಲಿರುವಂತೆ ಇವರಲ್ಲೂ ಕೂಡಾ ವಿಶೇಷ ಆಚಾರ, ಸಂಪ್ರದಾಯಗಳಿವೆ. ಮಂಗಳಮುಖಿಯರು ‘ರಂಡೆ ಹುಣ್ಣಿಮೆ’ ಎನ್ನುವ ವಿಶೇಷ ಆಚರಣೆ ಮಂಗಳೂರಿನಲ್ಲೂ ಮಾಡಿದರು.
ಒಂದು ಕಡೆ ಸಿಂಗಾರ.. ಇನ್ನೊಂದು ಕಡೆ ಹಾಡು, ಪೂಜೆ ಮಾಡುವುದು ಕಂಡಾಗ ಇದೇನು ವಿಶೇಷ ಸಂಪ್ರದಾಯ ಎಂದು ನಿಮಗನ್ನಿಸಬಹುದು ಅಲ್ವಾ..? ವೀಕ್ಷಕರೇ, ಇವರೆಲ್ಲರೂ ಮಂಗಳಮುಖಿಯರು. ಮಂಗಳಮುಖಿಯರ ಸಮಾಜದಲ್ಲಿಯೂ ವಿಭಿನ್ನ, ವಿಶೇಷ ಸಂಪ್ರದಾಯವಿದೆ. ಅದರಲ್ಲಿ ಒಂದು ರಂಡೆ ಹುಣ್ಣಿಮೆ ಒಂದು. ಪ್ರಸಿದ್ಧವಾದ ರೇಣುಕಾದೇವಿಯ ಶಕ್ತಿಪೀಠ ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆಯನ್ನು ರಂಡೆ ಹುಣ್ಣಿಮೆಯಾಗಿ ಆಚರಿಸುವ ಸಂದರ್ಭದಲ್ಲಿಯೇ ಮಂಗಳಮುಖಿಯರು ಈ ಸಂಪ್ರದಾಯ ಆಚರಿಸುತ್ತಿದ್ದು, ಮಂಗಳೂರಿನ ಕುಳಾಯಿಯ ಮಂಗಳಮುಖಿಯರು ಈ ಆಚರಣೆ ನಡೆಸಿದರು.
ಜಮದಗ್ನಿ ಋಷಿ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದ ಸಂದರ್ಭ ರೇಣುಕಾದೇವಿ 5 ಮಂದಿಗೆ ಜನ್ಮ ನೀಡುತ್ತಾರೆ. ಜಮದಗ್ನಿ ಋಷಿಯ ಬಳಿ ಕಾರ್ತವೀರ್ಯಾರ್ಜುನ ಕಾಮಧೇನು ಇರುತ್ತದೆ. ಅದು ಏನು ಬೇಡಿದರೂ ಈ ಭೂಮಿಯಲ್ಲಿ ಕೊಡುವಂತ ಒಂದು ತೆರನಾದ ವರ. ಅದಕ್ಕೆ ಇವರು ಆಸೆ ಬಿದ್ದು ಕಾರ್ತಿಕ ರಾಜನು ಬಿಲ್ಲಿನಲ್ಲಿ ಜಮದಗ್ನಿ ಮುನಿಗಳು ತಪೋನಿರತರಾಗಿದ್ದಾಗ ಅವರ ಶಿರಚ್ಛೇದನ ಮಾಡಿ ಅಪಹರಿಸುವನು. ಕೊಂದಾಗ ಒಂದು ತಿಂಗಳು ಅವರಿಗೆ ಮರಣ ಬರುತ್ತೆ. ಆ ಸಂದರ್ಭ ರೇಣುಕಾದೇವಿ ಮಗ ಪರಶುರಾಮನನ್ನು ಕೂಗುತ್ತಾಳೆ.
ಆಗ ಪರಶುರಾಮ ಬಂದು ಏನಾಯ್ತು ಕೇಳಿದಾಗ ಅವಳು ಎಲ್ಲವನ್ನು ವಿವರಿಸುತ್ತಾಳೆ. ಕೂಡಲೇ ತಂದೆಯನ್ನು ಉಳಿಸಿಕೊಳ್ಳಲು ಪರಶುರಾಮ ಕಾಡಿಗೆ ಹೋಗಿ ಸಂಜೀವಿನಿ ಬೇರು ತಂದು ನಂತರ ಜಮದಗ್ನಿ ಋಷಿಯನ್ನು ಕಾಪಾಡುತ್ತಾನೆ. ಆದರೆ ರೇಣುಕಾದೇವಿ ವರ್ಷದಲ್ಲಿ ಒಂದು ತಿಂಗಳು ರೇಣುಕಾದೇವಿ ವಿಧವೆಯಾಗಿ ಉಳಿದ 11ತಿಂಗಳು ಮುತ್ತೈದೆಯಾಗಿ ಇರುತ್ತಾರೆ ಎಂಬ ನಂಬಿಕೆಯಿದೆ. ರೇಣುಕಾಮಾತೆ ಮುತ್ತೈದೆ ಭಾಗ್ಯ ಕಳೆದುಕೊಂಡು ವಿಧವೆಯಾದಳು ಎಂಬ ಕಾರಣಕ್ಕಾಗಿ ಮಂಗಳಮುಖಿಯರು ಕೂಡಾ ರಂಡೆ ಹುಣ್ಣಿಮೆ ಆಚರಿಸುತ್ತಾರೆ. 41ದಿನದವರೆಗೆ ಇವರು ಕೂಡಾ ವಿಧವೆಯರಂತೆ ಇದ್ದು ಸಂಸ್ಕೃತಿ ಆಚರಿಸುತ್ತಾರೆ ಎಂದು ಇದೇ ವೇಳೆ ಮಂಗಳಮುಖಿಯೊಬ್ಬರು ತಿಳಿಸಿದರು.
ದೇವಿಯ ಆರಾಧಕರಾದ ಜೋಗಪ್ಪ, ಜೋಗತಿಯರೂ ಸುಮಂಗಲೆಯ ಸಂಕೇತಗಳಾದ ಬಳೆ, ಅರಿಷಿಣ-ಕುಂಕುಮ, ಹೂವು, ಕಾಲುಂಗುರ ಮುಂತಾದಗಳನ್ನು ತೆಗೆಯುತ್ತಾರೆ. ಬಳಿಕ ಜೋಗತಿ ಹಾಡು ಹಾಡುತ್ತಾ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ. ಕಾಯಿ, ಕರ್ಪೂರ, ಹಣ್ಣುಗಳ ಜತೆಗೆ ಹರಕೆ ತೀರಿಸಿ ಪುನೀತರಾಗುತ್ತಾರೆ. ಈ ವರ್ಷವೂ ಇದನ್ನು ನಾವು ಮಾಡಿದ್ದೇವೆ. ಇಂದು ನಮಗೆ ತುಂಬಾ ಬೇಸರದ ದಿನ ಎನ್ನುತ್ತಾರೆ ಮಂಗಳಮುಖಿಯರು. ವಿಶೇಷವಾಗಿ ಸವದತ್ತಿಯ ಎಲ್ಲಮ್ಮನ ಗುಡ್ಡದಲ್ಲಿ ನಡೆಯುವ ಉತ್ಸವದಲ್ಲಿ ಜೋಗಪ್ಪ ಮತ್ತು ಜೋಗತಿಯರು ಭಾಗವಹಿಸುತ್ತಾರೆ. ಇದನ್ನು ಆಚರಣೆ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎನ್ನುವುದು ಮಂಗಳಮುಖಿಯರು ನಂಬಿಕೊಂಡು ಬಂದಿರುವ ಒಂದು ಆರಾಧನೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka