ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ: ಆರೋಪಿಗಳ ಬಂಧನ
ಬೆಂಗಳೂರು: ಮನೆಯ ಜಗಲಿಯ ಮೇಲೆ ಮಲಗಿದ್ದ ರಂಗಭೂಮಿ ಕಲಾವಿದೆ ಮೇಲೆ ಕಿಡಿಗೇಡಿಗಳು ಆ್ಯಸಿಡ್ ದಾಳಿ ನಡೆಸಿರುವ ಘಟನೆ ನಂದಿನಿ ಲೇಔಟ್ನ ಗಣೇಶ ಬ್ಲಾಕ್ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ದೇವಿ ಆ್ಯಸಿಡ್ ದಾಳಿಗೊಳಗಾದ ರಂಗಭೂಮಿ ಕಲಾವಿದೆ. ಅವರು ಮನೆಯ ಜಗಲಿಯ ಮೇಲೆ ಮಲಗಿದ್ದ ವೇಳೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸಿದ್ದ ದೇವಿ, ಅನಾರೋಗ್ಯ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು. ಇದೀಗ ರಂಗಭೂಮಿಯ ಸಹ ಕಲಾವಿದರೇ ಈ ದುಷ್ಕ್ರತ್ಯವನ್ನು ಎಸಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ರಮೇಶ್, ಸ್ವಾತಿ, ಯೋಗೇಶ್ ಬಂಧಿತ ಆರೋಪಿಗಳು. ಈ ಘಟನೆ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಮೇಶ್ ಜಾರಕಿಹೊಳಿ ಮೇಲೆ ಇರುವ ಸಿಡಿ ಪ್ರಕರಣ ಕ್ಲಿಯರ್ ಆಗುತ್ತೆ: ಬಾಲಚಂದ್ರ ಜಾರಕಿಹೊಳಿ ವಿಶ್ವಾಸ
ಕರಾವಳಿ ಕಾಲೇಜ್ ವಿದ್ಯಾರ್ಥಿ ಭರತ್ ಭಾಸ್ಕರ್ ಆತ್ಮಹತ್ಯೆ: ಸೂಕ್ತ ಕ್ರಮಕ್ಕೆ ಒತ್ತಾಯ
102 ವರ್ಷದ ಮಾಜಿ ಶಿಕ್ಷಕನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!