ರಣವೀರ್ ಸಿಂಗ್ ಬೆತ್ತಲೆ ಚಿತ್ರ ವೈರಲ್: ಅಭಿಮಾನಿಗಳಿಂದ ಆಕ್ರೋಶ
ರಣವೀರ್ ಸಿಂಗ್ ಅವರ ಇತ್ತೀಚಿನ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ನಟ ಬೆತ್ತಲೆಯಾಗಿ ಪೋಸ್ ನೀಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. “ಪೇಪರ್” ಮ್ಯಾಗಜೀನ್ ಒಂದರ ಫೋಟೋ ಶೂಟ್ ಈಗ ವೈರಲ್ ಆಗಿದೆ. ‘ದಿ ಲಾಸ್ಟ್ ಬಾಲಿವುಡ್ ಸೂಪರ್ ಸ್ಟಾರ್’ ಎಂಬ ಶೀರ್ಷಿಕೆಯೊಂದಿಗೆ ಮ್ಯಾಗಜೀನ್ ಪೋಸ್ಟ್ ಮಾಡಿದ ಚಿತ್ರದ ಕೆಳಗೆ, ಅಭಿಮಾನಿಗಳು ಕಾಮೆಂಟ್ ಗಳ ಕೋಲಾಹಲ ಎಬ್ಬಿಸುತ್ತಿದೆ.
ರಣವೀರ್ ಪರವಾಗಿ ಮತ್ತು ವಿರುದ್ಧವಾಗಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಫ್ಯಾಷನ್ ಐಕಾನ್ ಕೂಡ ಆಗಿರುವ ರಣವೀರ್ ಈ ಹಿಂದೆಯೂ ವಿಶಿಷ್ಟ ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದರು.
ಮಹಿಳೆಯೊಬ್ಬರು ಇಂತಹ ನಗ್ನ ಫೋಟೋ ಶೂಟ್ ಮಾಡಿದ್ದರೆ, ನಿಮ್ಮ ಮನೋಭಾವ ಹೇಗಿರುತಿತ್ತು ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ಬಂಗಾಳಿ ನಟಿಯೊಬ್ಬರು ಕೇಳಿದ್ದಾರೆ.
ರಣವೀರ್ ಅವರ ಫೋಟೋಶೂಟ್ ಚಿತ್ರಗಳು ವೈರಲ್ ಆಗಿದ್ದು, ಮೀಮ್‌ಗಳು ಮತ್ತು ಅನೇಕ ಟ್ರೋಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka