“ನಾನು ಆಕೆಯನ್ನು ರೇಪ್ ಮಾಡಿಲ್ಲ, ಆದ್ರೆ ದೈಹಿಕ ಸಂಬಂಧ ಇತ್ತು” ಎಂದು ಒಪ್ಪಿಕೊಂಡ ಸಚಿವ
ಮುಂಬೈ: ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಮಹಾರಾಷ್ಟ್ರದ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್ ಮುಂಡೆ, ತಾನು ಅತ್ಯಾಚಾರ ಮಾಡಿಲ್ಲ. ಆದರೆ 2003ರಿಂದಲೂ ಆ ಮಹಿಳೆಯ ಜೊತೆಗೆ ತನಗೆ ದೈಹಿಕ ಸಂಬಂಧ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಎನ್ ಸಿಪಿ ನಾಯಕ ಧನಂಜಯ್, ಆಕೆಯ ಜೊತೆಗೆ ತಾನು ದೈಹಿಕ ಸಂಬಂಧ ಹೊಂದಿದ್ದೇನೆ. ಈ ವಿಚಾರವಾಗಿ ಆಕೆ ಹಾಗೂ ಆಕೆಯ ಸಹೋದರಿ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನದಲ್ಲಿದ್ದಾರೆ. ನನ್ನಿಂದ ಸಾಕಷ್ಟು ಹಣ ಕೂಡ ಸುಲಿಗೆ ಮಾಡಿದ್ದಾರೆ ಎಂದು ಧನಂಜಯ್ ಆರೋಪಿಸಿದ್ದಾರಲ್ಲದೇ, ನಾನು ಮಹಿಳೆಯೊಂದಿಗೆ 2003ರಿಂದ ದೈಹಿಕ ಸಂಬಂಧ ಹೊಂದಿದ್ದು, ನಮಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈ ಸಂಬಂಧವನ್ನು ಆಕೆಯ ಕುಟುಂಬ ಕೂಡ ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯ ಜೊತೆಗೆ ಸಂಬಂಧವಿರುವುದಾಗಿ ಒಪ್ಪಿಕೊಂಡ ಮುಂಡೆಯ ವಿರುದ್ಧ, ಮಹಾರಾಷ್ಟ್ರ ಬಿಜೆಪಿ ಮಹಿಳಾ ವಿಭಾಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು ಸಂಪುಟದಿಂದ ಧನಂಜಯ್ ರನ್ನು ವಜಾಗೊಳಿಸಲು ಮನವಿ ಮಾಡಿದೆ.
ಧನಂಜಯ್ ಮುಂಡೆಯ ವಿರುದ್ಧ ಗಾಯಕಿ ರೇಣು ಶರ್ಮಾ ಅಂಧೇರಿಯ ಒಶಿವರಾ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಿಸಿದ್ದರು. ಬಾಲಿವುಡ್ ನಲ್ಲಿ ಗಾಯಕಿಯಾಗಲು ತಾನು ಸಹಾಯ ಮಾಡುವುದಾಗಿ ನಂಬಿಸಿ, ನಿರಂತರವಾಗಿ ದೈಹಿಕ ಸಂಬಂಧ ಬೆಳೆಸಿದ್ದಾರೆಂದು ದೂರಿನಲ್ಲಿ ಅವರು ತಿಳಿಸಿದ್ದರು.
2008ರಲ್ಲಿ ಮೊದಲ ಬಾರಿಗೆ ಧನಂಜಯ್ ಮುಂಡೆ ರೇಪ್ ಮಾಡಿದ್ದಾರೆ. ಮನೆಯಲ್ಲಿ ರೇಣು ಒಂಟಿಯಾಗಿರುವಾಗ ರೇಪ್ ಮಾಡಿ, ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿಂದಾಚೆಗೆ ಅನೇಕ ಬಾರಿ ಕೃತ್ಯವೆಸಗಿದ್ದಾರೆ. ಆ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.