ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ: ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮತಚಲಾಯಿಸಿದ ಎನ್.ಮಹೇಶ್ - Mahanayaka
10:18 AM Thursday 12 - December 2024

ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ: ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮತಚಲಾಯಿಸಿದ ಎನ್.ಮಹೇಶ್

n mahesh
10/05/2023

ಚಾಮರಾಜನಗರದಲ್ಲಿ ಇಂದು ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭಗೊಂಡಿದೆ.  ಚಾಮರಾಜನಗರದ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟ ಪರಿಣಾಮ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಉಪ್ಪಾರ ಬೀದಿಯ ಮತಗಟ್ಟೆ 69 ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.  ಬಳಿಕ ಅಧಿಕಾರಿಗಳು ಮತಯಂತ್ರವನ್ನು ಸರಿಪಡಿಸುವ ಕಾರ್ಯ ಪೂರ್ಣಗೊಳಿಸಿದರು.  ಇವಿಎಂ ಕೈಕೊಟ್ಟು ಕಾರಣ ಮತದಾನ ಅರ್ಧ ತಾಸು ತಡವಾಯ್ತು. ಮತ ಹಾಕಲು ಬಂದವರು ಅರ್ಧ ಗಂಟೆ ಕಾದು ಅಸಮಾಧಾನ ವ್ಯಕ್ತಪಡಿಸಿದರು. ಚಾಮರಾಜನಗರದ ಉಳಿದೆಡೆ ಬಿರುಸಿನ ಮತದಾನ ನಡೆಯಿತು.

ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಮತದಾನ:

ಕೊಳ್ಳೇಗಾಲದ ಬಿಜೆಪಿ ಅಭ್ಯರ್ಥಿ ಶಾಸಕ ಎನ್.ಮಹೇಶ್ ಕೊಳ್ಳೇಗಾಲ ಪಟ್ಟಣದ ಐಎಸ್ ಸಿ ಶಾಲೆಯ ಮತಗಟ್ಟೆ ಸಂಖ್ಯೆ 121 ರಲ್ಲಿ ಮತ ಚಲಾವಣೆ ಮಾಡಿದರು.

ಮತ ಚಲಾವಣೆಗೂ ಮುನ್ನ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ  ಮಾಡಿ ನಂತರ ಮತ ಚಲಾವಣೆ ಮಾಡಿದರು. ಎನ್.ಮಹೇಶ್ ಅವರ ಜೊತೆಗೆ ಅವರ ಪುತ್ರ ಅರ್ಜುನ್ ಕೂಡ ಮತದಾನ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ