ಹಳದಿ ಬಣ್ಣದ ಆಮೆ ಪತ್ತೆ | ಯಾವ ಊರಿನಲ್ಲಿ ಗೊತ್ತಾ? | ವಿಡಿಯೋ ನೋಡಿ
ಪ್ರಕೃತಿ ಅಂದರೆ ಅದೊಂದು ವಿಸ್ಮಯದ ಬೃಹತ್ ಗೂಡು. ಇಲ್ಲಿ ಜೀವಿಗಳ ಜೀವ ವೈವಿಧ್ಯತೆಯೇ ಬಹಳ ಚೆಂದ. ಇದೀಗ ಅಪರೂಪದ ಘಟನೆಯೊಂದಕ್ಕೆ ಈ ಪ್ರಕೃತಿ ಸಾಕ್ಷಿಯಾಗಿದೆ. ನೀವು ಕಪ್ಪು-ಬಿಳಿ ಆಮೆಯನ್ನು ನೀವು ನೋಡಿರ ಬಹುದು. ಆದರೆ, ಹಳದಿ ಆಮೆಯನ್ನು ನೀವು ಎಂದಾದರೂ ನೊಡಿದ್ದೀರಾ? ಇಲ್ಲವಾದರೆ, ಈ ಸ್ಟೋರಿ ನೀವು ತಪ್ಪದೇ ಓದಿ..
ಹಳದಿ ಬಣ್ಣದ ಆಮೆಯೊಂದರ ಚಿತ್ರ ವ್ಯಾಪಕವಾಗಿ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಇದು ಫೋಟೋ ಎಡಿಟ್ ಮಾಡಿರಬಹುದು ಎಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಆ ಬಳಿಕ ಇದು ನಿಜವಾದ ಜೀವಂತ ಆಮೆ ಎನ್ನುವುದು ತಿಳಿಯಿತು.
ಈ ಆಮೆ ಪತ್ತೆಯಾಗಿರುವುದು ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿರುವ ಕೊಳವೊಂದರಲ್ಲಿ. ಈ ಆಮೆಯನ್ನು ರಕ್ಷಿಸಿ ಫಾರೆಸ್ಟ್ ಸರ್ವಿಸ್ ಅಧಿಕಾರಿ ದೇಬಾಶಿಶ್ ಶರ್ಮಾ ಅವರು ಇದರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಆಮೆಯ ವಿವರಗಳನ್ನೂ ನೀಡಿದ್ದಾರೆ.
ಇದು ಪ್ಲಾಫ್ ಸೇಲ್ ಆಮೆಯಾಗಿದೆ. ಇದು ಬಹಳ ಹಳದಿ ಬಣ್ಣದಲ್ಲಿರುತ್ತದೆ. ಇಂತಹ ಆಮೆಗಳು ಬಹಳ ಅಪರೂಪಕ್ಕೆ ಕಾಣಸಿಗುತ್ತವೆ. ಇದು ಹುಟ್ಟಿನಿಂದ ಬರುವ ಕಾಯಿಲೆಯಿಂದಾಗಿ ಈ ರೀತಿಯಾಗಿ ಬಣ್ಣ ಪಡೆದುಕೊಳ್ಳುತ್ತವೆ. ಅಥವಾ ಅನುವಂಶೀಯ ರೂಪಾಂತರದ ಪ್ರಕ್ರಿಯೆಯೂ ಆಗಿರಬಹುದು ಎಂದು ಶರ್ಮಾ ವಿವರಿಸಿದ್ದಾರೆ. ಅಂದ ಹಾಗೆ ಈ ಹಿಂದೆ ಒಡಿಶಾದಲ್ಲಿಯೂ ಇಂತಹದ್ದೇ ಒಂದು ಆಮೆ ಪತ್ತೆಯಾಗಿತ್ತು.
A rare yellow turtle was spotted & rescued in Balasore, Odisha yesterday.
Most probably it was an albino. One such aberration was recorded by locals in Sindh few years back. pic.twitter.com/ZHAN8bVccU
— Susanta Nanda (@susantananda3) July 20, 2020