ರಶ್ಮಿಕಾ ಮಂದಣ್ಣ ಜೊತೆಗೆ ತೆರೆ ಹಂಚಿಕೊಳ್ಳುತ್ತಾರಾ ಡಾಲಿ ಧನಂಜಯ್? - Mahanayaka

ರಶ್ಮಿಕಾ ಮಂದಣ್ಣ ಜೊತೆಗೆ ತೆರೆ ಹಂಚಿಕೊಳ್ಳುತ್ತಾರಾ ಡಾಲಿ ಧನಂಜಯ್?

dali dhananjay
20/12/2021

ಸಿನಿಡೆಸ್ಕ್: ಡಾಲಿ ಧನಂಜಯ್ ಅಂದ್ರೆ, ಸಿನಿಪ್ರಿಯರಿಗೆ ಯಾವಾಗಲೂ ಅಚ್ಚುಮೆಚ್ಚು. ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲಿಯೂ ಮಿಂಚುತ್ತಿರುವ ಡಾಲಿಗೆ ಅಪಾರ ಪ್ರಮಾಣದ ಯುವ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಪುಷ್ಪ ಚಿತ್ರದಲ್ಲಿ  ಪ್ರಮುಖ ಪಾತ್ರ ಮಾಡಿದ್ದ ಡಾಲಿ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಇದೇ ಡಿಸೆಂಬರ್ 24ರಂದು ಡಾಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ, ಬಡವ ರಾಸ್ಕಲ್ ಚಿತ್ರ ತೆರೆಗೆ ಬರಲಿದೆ. ಇದೇ ಸಂದರ್ಭದಲ್ಲಿ ಡಾಲಿ ಅಭಿಮಾನಿಗಳು ಡಾಲಿಗೆ ಹೊಸತೊಂದು ಬೇಡಿಕೆಯನ್ನಿಟ್ಟಿದ್ದು, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಜೊತೆಗೆ ತೆರೆ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಪುಷ್ಪ ಚಿತ್ರದ ಪ್ರಮೋಷನ್ ಕಾರ್ಯಕ್ರಮದ ವೇಳೆ ರಶ್ಮಿಕಾ ಮಂದಣ್ಣ, ಓಡೋಡಿ ಬಂದ ಡಾಲಿ ಅವರನ್ನು ಅಪ್ಪಿಕೊಂಡು ವಿಶ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಅಭಿಮಾನಿಯೋರ್ವ, ರಶ್ಮಿಕಾ ಮಂದಣ್ಣ ಅವರ ಜೊತೆಗೆ ತೆರೆ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.

ಅಭಿಮಾನಿಯ ಮನವಿಗೆ ಪ್ರತಿಕ್ರಿಯೆ ನೀಡಿರುವ ಡಾಲಿ, ಅಂತಹದ್ದೊಂದು ಅವಕಾಶ ಬಂದರೆ, ನಿಜಕ್ಕೂ ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕನ್ನಡ ಬಾವುಟ ಸುಟ್ಟದ್ದು, ಕನ್ನಡ ತಾಯಿಯನ್ನೇ ಸುಟ್ಟಂತೆ | ನಟ ಶಿವರಾಜ್ ಕುಮಾರ್

ಆನ್ ಲೈನ್ ಕ್ಲಾಸ್ ನ ಗ್ರೂಪ್ ಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ!

ಬೆಳಗಾವಿ ಸುವರ್ಣಸೌಧ ಮುತ್ತಿಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣು

ಮಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅತಿಥಿ ಉಪನ್ಯಾಸಕನ ಬಂಧನ

ಇತ್ತೀಚಿನ ಸುದ್ದಿ