ರಣಬೀರ್ ಕಪೂರ್ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಪ್ರಮುಖ ನಾಯಕಿಯರಲ್ಲಿ ಒಬ್ಬರು. ಇಂಡಸ್ಟ್ರಿಗೆ ಬಂದಾಗಿನಿಂದಲೂ ಕೈ ತುಂಬಾ ಚಿತ್ರಗಳು ರಶ್ಮಿಕಾ ಳನ್ನು ಹುಡುಕಿಕೊಂಡು ಬಂದಿವೆ. ಮೊದಲ ಬಾಲಿವುಡ್ ಚಿತ್ರ ಬಿಡುಗಡೆಗೂ ಮುನ್ನವೇ ಮುಂದಿನ ಹಿಂದಿ ಚಿತ್ರವೂ ನಟಿಯನ್ನು ಹುಡುಕಿಕೊಂಡು ಬಂದಿದೆ.
ರಣಬೀರ್ ಕಪೂರ್ ಅಭಿನಯದ ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ನಂತರ, ಸಂದೀಪ್ ರೆಡ್ಡಿ ವಾಂಕಾ ನಿರ್ದೇಶನದ ಹೊಸ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ನಟಿಸಿರುವ ಈ ಚಿತ್ರಕ್ಕೆ ಅನಿಮಲ್ ಎಂದು ಹೆಸರಿಡಲಾಗಿದೆ.
ಮುಂದಿನ ವರ್ಷ ಆಗಸ್ಟ್ 11 ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣಬೀರ್ ಸದ್ಯ ಬ್ರಹ್ಮಾಸ್ತ್ರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರ ಮಿಷನ್ ಮಜ್ನು ಈ ವರ್ಷ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಗುಡ್ ಬೈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ನಟಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಟಿ ಮಲೈಕಾ ಅರೋರಾ ಕಾರು ಅಪಘಾತ; ತಲೆಗೆ ತೀವ್ರವಾದ ಏಟು
ಐಸಿಯುನಲ್ಲಿದ್ದ ರೋಗಿಯನ್ನು ಕಚ್ಚಿ ಕೊಂದ ಇಲಿಗಳು
80 ಸಾವಿರ ರೂ. ಖರ್ಚು ಮಾಡಿ ಪ್ರೀತಿಯ ನಾಯಿಯ ಪ್ರತಿಮೆ ನಿರ್ಮಿಸಿದ ಯಜಮಾನ!