ಪುರುಷರ ಒಳ ಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ: ಸೃಷ್ಟಿಯಾಯ್ತು ಹೊಸ ವಿವಾದ
ಭಾರತದಲ್ಲಿಯೇ ಇದೀಗ ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿ ಇದೀಗ ಅವರು ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲಿಯೂ ಬಹಳ ಬೇಡಿಕೆಯನ್ನು ಹೊಂದಿದ್ದಾರೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್ ಗಳು ಅವರನ್ನು ತಮ್ಮ ರಾಯಭಾರಿಯಾಗಿ ನೇಮಿಸಿಕೊಳ್ಳಲು ಸ್ಪರ್ಧೆಯಲ್ಲಿವೆ. ಆದರೆ, ಇದೀಗ ಅವರು ನಟಿಸಿರುವ ಜಾಹೀರಾತೊಂದು ವಿವಾದಕ್ಕೆ ಕಾರಣವಾಗಿದೆ.
ಪುರುಷರ ಒಳ ಉಡುಪು ಜಾಹೀರಾತಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಯಾಗಿ ನಟಿಸಿದ್ದಾರೆ. ಆದರೆ, ಈ ಜಾಹೀರಾತಿನ ಕಾನ್ಸೆಪ್ಟ್ ನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ. ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ ಅವರು ಯೋಗಾ ಟೀಚರ್ ಆಗಿದ್ದಾರೆ. ನಟ ವಿಕ್ಕಿ ಕೌಶಲ್ ಯೋಗ ಕಲಿಯುಲು ಬರುತ್ತಿರುವ ಒಬ್ಬ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ಯೋಗ ಮಾಡುವ ವೇಳೆ, ವಿಕ್ಕಿ ಗೌಶಲ್ ಅವರ ಸೊಂಟದಲ್ಲಿ ಒಳ ಉಡುಪಿನ ಪಟ್ಟಿ ಕಾಣಿಸುತ್ತದೆ. ಈ ಪಟ್ಟಿಯನ್ನು ನೋಡಿ ರಶ್ಮಿಕಾ ಯೋಗ ಮಾಡುವುದನ್ನು ನಿಲ್ಲಿಸಿ ಆಕರ್ಷಿತರಾಗಿ ನೋಡುವುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ಮಹಿಳೆಯು ಪುರುಷನ ಒಳ ಉಡುಪು ನೋಡಿ ಆಕರ್ಷಿತಳಾಗುತ್ತಾಳೆ ಎಂಬ ಕಾನ್ಸೆಪ್ಟ್ ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ. ಇದು ಹೆಣ್ಣು ಮಕ್ಕಳ ಮನಸ್ಥಿತಿಯನ್ನು ಕೆಟ್ಟದಾಗಿ ಬಿಂಬಿಸಿದಂತಾಗುವುದಿಲ್ಲವೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಇದರ ಜೊತೆಗೆ ಇದೇ ರೀತಿಯಲ್ಲಿ ಪುರುಷನೊಬ್ಬ ಮಹಿಳೆಯ ಒಳ ಉಡುಪು ನೋಡಿ ಆಕರ್ಷಿತನಾಗುವಂತೆ ಮುಂದೆ ಬೇರೆ ಜಾಹೀರಾತಿನವರು ಕಾನ್ಸೆಪ್ಟ್ ನೀಡಿದರೆ, ಅದು ಯಾವ ರೀತಿಯ ಸಂದೇಶವನ್ನು ನೀಡುತ್ತದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಪ್ರೇಯಸಿಯ ಕೈಕಾಲು ಕಟ್ಟಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಿಯಕರ!
‘ತಾಲಿಬಾನಿ ಬಿಜೆಪಿ’ ಭಾರತವನ್ನು ಆಳಲು ಸಾಧ್ಯವಿಲ್ಲ | ಮಮತಾ ಬ್ಯಾನರ್ಜಿ ಕಿಡಿ
ಕಿತ್ತು ತಿನ್ನುವ ಬಡತನ, ಉದ್ಯೋಗವೂ ಇಲ್ಲ | ನೊಂದ ಅಣ್ಣ ತಮ್ಮ ಆತ್ಮಹತ್ಯೆಗೆ ಶರಣು
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಕ್ಯಾಂಪಸ್ ಫ್ರಂಟ್ ತಹಶೀಲ್ದಾರ್ ಕಚೇರಿಗೆ ಮಾರ್ಚ್
ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಮಾಲಿಕ ಸಹಿತ ಮೂವರು ಅರೆಸ್ಟ್
ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ