ಬ್ಯಾನ್ ಬೆದರಿಕೆ, ಅಸಭ್ಯ ಟ್ರೋಲ್ ಬಳಿಕ ಕಾಂತಾರ ಚಿತ್ರ ವೀಕ್ಷಿಸಿದ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರ ನೋಡಿಲ್ಲ, ರಿಷಬ್ ಶೆಟ್ಟಿ ಅವರಿಗೆ ಅವಮಾನ ಮಾಡಿದ್ರು ಎಂಬೆಲ್ಲ ವಾದಗಳನ್ನು ಮುಂದಿಟ್ಟುಕೊಂಡು ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೆಲವರು ಟ್ರೋಲ್ ಮಾಡಿರುವ ಘಟನೆಯ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.
ನಾನು ಕಾಂತಾರ ಚಿತ್ರವನ್ನು ನೋಡಿದ್ದೇನೆ. ಬರೇ ಚಿತ್ರ ನೋಡಿರುವುದು ಅಷ್ಟೇ ಅಲ್ಲ, ರಿಷಬ್ ಶೆಟ್ಟಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ, ಅವರು ನನಗೆ ಧನ್ಯವಾದ ಎಂದು ಪ್ರೀತಿಯಿಂದ ಉತ್ತರ ಕೊಟ್ಟಿದ್ದಾರೆ ಎಂದು ರಶ್ಮಿಕಾ ತಿಳಿಸಿದ್ದಾರೆ.
ಪರ್ಸನಲ್ ಆಗಿ ಏನೇನು ನಡೆಯುತ್ತದೆ ಅನ್ನೋದು ಜಗತ್ತಿಗೆ ಗೊತ್ತಾಗಲ್ಲ, ಎಲ್ಲವನ್ನು ಹೊರ ಜಗತ್ತಿಗೆ ಹೇಳಿಯೇ ಮಾಡಲು ಸಾಧ್ಯವಿಲ್ಲ. ನನ್ನ ಪರ್ಸನಲ್ ಜೀವನವನ್ನು ಕ್ಯಾಮರಾ ಮುಂದೆ ತರಲು ನನಗೆ ಸಾಧ್ಯವಿಲ್ಲ. ಎಲ್ಲವೂ ಆ ದೇವರಿಗೆ ಗೊತ್ತಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ವೃತ್ತಿ ಜೀವನದ ಬಗ್ಗೆ ಜನ ಏನು ಹೇಳುತ್ತಾರೆ, ಅದರ ಬಗ್ಗೆ ಹಾರ್ಡ್ ವರ್ಕ್ ಮಾಡಬೇಕು, ಅವರು ಮಾತನಾಡುವುದು ಅವರಿಗೆ ಬಿಟ್ಟದ್ದು, ನಾನೇನೂ ಉತ್ತರ ನೀಡಿಲ್ಲ ಎಂದಿದ್ದಾರೆ.
ಕಾಂತಾರ ಚಿತ್ರವನ್ನು ರಶ್ಮಿಕಾ ಮಂದಣ್ಣ ನೋಡಬೇಕು ಅನ್ನೋ ವಿಷಯ ಯಾಕೆ ಪ್ರಸ್ತಾಪವಾಯ್ತೋ ಗೊತ್ತಿಲ್ಲ, ಕಾಂತಾರ ಸಕ್ಸಸ್ ಆಗ್ತಿದಂತೆಯೇ ರಶ್ಮಿಕಾ ಮಂದಣ್ಣ ಈ ಚಿತ್ರದ ಬಗ್ಗೆ ಏನೂ ಮಾತನಾಡಿಲ್ಲ, ಸಕ್ಸಸ್ ಗೆ ಅಭಿನಂದನೆ ಸಲ್ಲಿಸಿಲ್ಲ ಅನ್ನೋ ಒಂದು ವಾದ ಆರಂಭವಾಗಿತ್ತು. ಬಳಿಕ ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಅನ್ನೋ ಒತ್ತಾಯಗಳು ಕೇಳಿ ಬಂದವು. . ಟಿವಿ ಕಾಮಿಡಿ ಶೋವೊಂದರಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಅತ್ಯಂತ ಅಸಭ್ಯ ಸ್ಕ್ರಿಪ್ಟ್ ಬಳಸಿ ಅವಮಾನಿಸಲಾಯಿತು.
ಕೆಲವರ ವೈಯಕ್ತಿಕ ವಿಚಾರಕ್ಕಾಗಿ ಓರ್ವ ಪ್ರತಿಭಾನ್ವಿತ ನಟಿಯನ್ನು ಯಾಕೆ ಬ್ಯಾನ್ ಮಾಡಬೇಕು ಅಂತ, ಕೆಲವು ಪ್ರಜ್ಞಾವಂತರು ಪ್ರಶ್ನಿಸಿದ್ದು ಕೂಡ ಇದೆ. ಯಾರೇ ಆಗಲಿ ಒಂದು ಸಿನಿಮಾವನ್ನು ಇಷ್ಟಪಟ್ಟು ನೋಡಿ, ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುವುದು ಹೆಮ್ಮೆಯ ವಿಚಾರ ಆಗುತ್ತದೆ. ಆದರೆ, ಓರ್ವ ನಟಿಗೆ ಒತ್ತಡ ಹಾಕಿ, ಬ್ಯಾನ್ ಮಾಡುವ ಬೆದರಿಕೆ ಹಾಕಿ ಸಿನಿಮಾ ನೋಡುವಂತೆ ಮಾಡಿ ಅಭಿನಂದನೆ ಹೇಳಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಅಥವಾ ಅಂತಹ ಸ್ಥಿತಿ ಯಾರಿಗಾದ್ರೂ ಬೇಕಾ? ಅನ್ನೋ ಮಾತುಗಳು ಕೇಳಿ ಬಂದಿದೆ.
ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅವರಿಗೆ ಅವರದ್ದೇ ಆದ ಕೆಲಸಗಳಿರುತ್ತವೆ. ಅದರ ನಡುವೆ ಬಿಡುವು ಮಾಡಿಕೊಂಡು ಹೋಗಿ ಚಿತ್ರ ನೋಡಬೇಕು. ಆದರೆ, ಇದರ ನಡುವೆ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿ, ವೈಯಕ್ತಿಕ ಚಾರಿತ್ರ್ಯ ಹರಣ ಮಾಡಿ, ಚಿತ್ರರಂಗದಿಂದಲೇ ಬ್ಯಾನ್ ಮಾಡಿಸಬೇಕು ಅನ್ನೋ ಕುತಂತ್ರ ಎಷ್ಟರ ಮಟ್ಟಿಗೆ ಸರಿ? ಅನ್ನೋ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka