ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರಧ್ವಜಕ್ಕೆ ಸರಣಿ ಅವಮಾನ
ಬೆಳ್ತಂಗಡಿ : ಗ್ರಾಮದ ವಿಧಾನ ಸಭೆಯಂತಿರುವ ಗ್ರಾಮಪಂಚಾಯತು ಸೇರಿದಂತೆ ಸರಕಾರಿ ಕಛೇರಿಗಳಲ್ಲಿ ಪ್ರತಿ ದಿನ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣ ಮಾಡಬೇಕೆಂಬ ಸರಕಾರಿ ನಿಯಮ ಜಾರಿಯಲ್ಲಿದ್ದರೂ ಹೊಸಂಗಡಿ ಗ್ರಾಮಪಂಚಾಯತ್ ಕಾರ್ಯಾಲಯದಲ್ಲಿ ಕೆಲವು ರಜಾ ದಿನಗಳಲ್ಲಿ ಧ್ವಜಾರೋಹಣ ಮಾಡದೆ ಅಗೌರವ ತೋರಿಸುತ್ತಿರುವ ಪ್ರಸಂಗ ಆಗಾಗ ನಡೆಯುತ್ತಿರುವುದನ್ನು ಗ್ರಾಮಸ್ಥರು ಫೊಟೋ , ವೀಡಿಯೋ ಸಹಿತ ಪತ್ತೆಹಚ್ಚಿದ್ದಾರೆ.
ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮಪಂಚಾಯತು ಕಛೇರಿಯ ಆವರಣದಲ್ಲಿ ಪ್ರತಿ ದಿನ ರಾಷ್ಟ್ರ ಧ್ವಜಾರೋಹಣ ಮಾಡುವ ನಿಯಮವನ್ನು ನಿರಾತಂಕವಾಗಿ ಕಡೆಗಣಿಸಲಾಗುತ್ತಿದ್ದು ಕೆಲವೊಮ್ಮೆ ಭಾನುವಾರವೂ ಸೇರಿದಂತೆ ಕೆಲವು ವಿಶೇಷ ರಜಾ ದಿನಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡದೆ ಅಗೌರವ ತೋರಿಸುತ್ತಿರುವ ಪ್ರಕರಣ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ.
ಈ ಕುರಿತು ಇಲ್ಲಿನ ಗ್ರಾಮಪಂಚಾಯತು ಆಡಳಿತ ಈ ಬಗ್ಗೆ ದಿವ್ಯ ನಿರ್ಲಕ್ಷ್ಯವಹಿಸುತ್ತಿರುವುದು ಸ್ಥಳೀಯ ರಾಷ್ಟ್ರಧ್ವಜ ಪ್ರೇಮಿಗಳ ಕಳವಳಕ್ಕೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಾಳೆಯಿಂದಲೇ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು ತರಗತಿಗೆ ಬರಲಿ: ಶಾಸಕ ರಘುಪತಿ ಭಟ್
ಚೀನಾವನ್ನು ಮತ್ತೆ ನಡುಗಿಸಿದ ಕೊರೊನಾ: ಒಂದೇ ದಿನ 5 ಸಾವಿರಕ್ಕೂ ಹೆಚ್ಚು ಕೇಸ್!
ಹಿಜಾಬ್ ವಿಚಾರ: ಹೈಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು; ಸಿಎಂ ಬಸವರಾಜ ಬೊಮ್ಮಾಯಿ
ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್