ರಾಷ್ಟ್ರಧ್ವಜದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿ ಹಾರಿಸಿದ ಆರೋಪಿಯ ಬಂಧನ

14/08/2022
ಬಳ್ಳಾರಿ: ರಾಷ್ಟ್ರಧ್ವಜದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿ, ಮನೆ ಮೇಲೆ ಧ್ವಜ ಹಾರಿಸಿರುವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ನಗರದ ಗಣೇಶ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಾಲೋನಿಯ ರಘು ಎನ್ನುವಾತ ರಾಷ್ಟ್ರಧ್ವಜದ ಅಶೋಕ ಚಕ್ರದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿದ್ದು, ಮನೆಯ ಮೇಲೆ ಧ್ವಜ ಹಾರಿಸಿದ್ದಾನೆ.
ವಿಚಾರ ತಿಳಿದ ಹಿಂದೂ ಕಾರ್ಯಕರ್ತರು ಆತನ ಮನೆಯ ಮುಂದೆ ಜಮಾಯಿಸಿದ್ದು, ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಗಾಂಧಿನಗರ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಆರೋಪಿ ರಘುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka