ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್ - Mahanayaka

ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್

st hasan
16/08/2021

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ  ಸಮಾಜವಾದಿ ಪಾರ್ಟಿ ಸಂಸದ ಎಸ್.ಟಿ.ಹಸನ್ ಅವರು ರಾಷ್ಟ್ರಗೀತೆ ಸಾಲು ಮರೆತಿದ್ದು, ಕೆಲವು ಸಾಲುಗಳನ್ನು ಹಾಡಿದ ಬಳಿಕ ರಾಷ್ಟ್ರಗೀತೆ ಅವರಿಗೆ ಮರೆತುಹೋಗಿದೆ. ಈ ವೇಳೆ ಕಕ್ಕಾಬಿಕ್ಕಿಯಾದ ಅವರು ಕೊನೆಯ ಜಯ ಹೇ ಜಯ ಹೇ ಎನ್ನುವ ಸಾಲುಗಳನ್ನು ಹಾಡಿ ಮುಜುಗರಕ್ಕೀಡಾಗಿರುವ ವಿಡಿಯೋವೊಂದು ವೈರಲ್ ಆಗಿದೆ.

ಧ್ವಜಾರೋಹಣದ ನಡೆಸಿದ ಉತ್ಸಾಹದಲ್ಲಿ ಸಂಸದ ಹಸನ್ ಅವರ ಜೊತೆಗಿದ್ದ ವ್ಯಕ್ತಿಯೋರ್ವ, ರಾಷ್ಟ್ರಗೀತೆ ಹಾಡಲು ಶುರುಮಾಡಿದ್ದು. ಜನಗಣ ಮನ ಅಧಿನಾಯಕ ಜಯ ಹೇ, ಭಾರತ್ ಭಾಗ್ಯವಿಧಾತ, ಪಂಜಾಬ್ ಸಿಂಧು ಗುಜರಾತ್ ಮರಾಠ…. ಎಂಬಲ್ಲಿಯವರೆಗೆ ಹಾಡಿದ ವ್ಯಕ್ತಿ ಮುಂದಿನ ಸಾಲುಗಳು ಯಾವುದು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದಾರೆ. ಈ ವೇಳೆ ಅವರ ಜೊತೆಗಿದ್ದ ಸಂಸದರು ಕೂಡ ಸುಮ್ಮನೆ ನಿಂತಿದ್ದಾರೆ. ಮುಂದಿನ ಸಾಲನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿಯೂ ಸಾಧ್ಯವಾಗದಿದ್ದಾಗ ಕೊನೆಯೆ ಜಯ ಹೇ, ಜಯ ಹೇ ಎಂದು ಅಲ್ಲಿಗೇ ರಾಷ್ಟ್ರಗೀತೆಯನ್ನು ಮುಗಿಸಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್ ನ ಸಂಸದರಾಗಿರುವ ಹಸನ್ ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಕಾರ್ಯಕರ್ತರ ಜೊತೆಗೆ ಧ್ವಜಾರೋಹಣ ನಡೆಸಿದ್ದಾರೆ. ಈ ವೇಳೆ ರಾಷ್ಟ್ರ ಗೀತೆ ಹಾಡಲು ಮುಂದೆ ನಿಂತಿದ್ದ ಕಾರ್ಯಕರ್ತ ಸ್ವಲ್ಪವೇ ಗೀತೆಯನ್ನು ಹಾಡಿ, ಬಳಿಕದ ಸಾಲುಗಳು ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಾನೆ. ಇದರಿಂದಾಗಿ ಸಂಸದರು ಸೇರಿದಂತೆ ಎಲ್ಲರೂ ಕಕ್ಕಾಬಿಕ್ಕಿಯಾಗಿ ನಿಲ್ಲುವಂತಾಗಿತ್ತು.

ಇನ್ನೂ ಈ ಘಟನೆ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರಾ, ನೀವು ಮಾಡಿದ ಅವಾಂತರದಿಂದ ಪಾರಾಗಲು ಜಯ ಹೇ ಜಯ ಹೇ ಎಂದು ಹೇಳುವುದು ಉತ್ತಮ ಮಾರ್ಗ ಎಂದು ತಿಳಿದುಕೊಂಡಿದ್ದೀರಿ, ಸಮಾಜವಾದಿಗಳೇ ವ್ಹಾ…! ಎಂದು ಶೀರ್ಷಿಕೆ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದೊಳಗೆ ಮೊಬೈಲ್ ಬಳಕೆ ನಿಷೇಧ | ಕಾರಣ ಏನು ಗೊತ್ತಾ?

ಅಪ್ರಾಪ್ತ ವಯಸ್ಸಿನ ಬಾಲಕನಿಂದ 3 ತಿಂಗಳ ಮಗುವಿನ ಮೇಲೆ ಅತ್ಯಾಚಾರ!

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶಕ್ಕೆ | ಕಾಬುಲ್ ಗೆ ಪ್ರವೇಶಿಸಿ ವಶಕ್ಕೆ ಪಡೆದುಕೊಂಡ ಉಗ್ರರು

ಸ್ವಾತಂತ್ರ್ಯ ರಥ ತಡೆದು ಪ್ರತಿಭಟಿಸಿದ ಎಸ್ ಡಿಪಿಐ ಕಾರ್ಯಕರ್ತರು | ಸಾರ್ವರ್ಕರ್ ಫೋಟೋಗೆ ಬಳಸಿದ್ದಕ್ಕೆ ವಿರೋಧ

ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ WWE ಸೂಪರ್ ಸ್ಟಾರ್ ಗಳು

ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರ ಮೇಲೆ ಪ್ರವಹಿಸಿದ ವಿದ್ಯುತ್: ಓರ್ವ ಬಾಲಕನ ದಾರುಣ ಸಾವು

ಇತ್ತೀಚಿನ ಸುದ್ದಿ