ರಾಷ್ಟ್ರಪತಿ, ಸಿಎಂ ಹೋಗುತ್ತಿದ್ದಂತೆಯೇ ಕಿತ್ತು ಬಂದ ರಸ್ತೆ!
![road](https://www.mahanayaka.in/wp-content/uploads/2021/11/road.jpg)
ಸಂತೇಮರಹಳ್ಳಿ: ಜಿಲ್ಲೆಗೆ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಬರುತ್ತಾರೆ ಎಂಬ ಕಾರಣಕ್ಕೆ ದುರಸ್ತಿಯಾಗಿದ್ದ ಸಂತೇಮರಹಳ್ಳಿ ಮೂಗೂರು ಕ್ರಾಸ್ ವರೆಗಿನ ರಸ್ತೆಯು ಅವರು ಹೋಗಿ ಒಂದು ತಿಂಗಳಿನಲ್ಲಿಯೇ ಮತ್ತೆ ಕಿತ್ತು ಹೋಗಿದೆ.
ಅಕ್ಟೋಬರ್ 7ರಂದು ವೈದ್ಯಕೀಯ ಕಾಲೇಜಿ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಸಿಎಂ ಬೊಮ್ಮಾಯಿ ಬಂದಿದ್ದರು. ಹೀಗಾಗಿ ರಸ್ತೆ ಟಾರು ಹಾಕಲಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲೇ ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು.
ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್ ವರೆಗೆ ಎಂಟು ಕಿ.ಮೀ ಉದ್ದದ ರಸ್ತೆಯಲ್ಲಿ ಆರು ಕಿ.ಮೀ. ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು 80 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿತ್ತು. ಆದರೆ ಕಾಮಗಾರಿ ನಡೆದು ಒಂದು ತಿಂಗಳಿನಲ್ಲಿಯೇ ರಸ್ತೆ ಕಿತ್ತು ಬಂದಿದ್ದು, ಡಾಂಬರ್, ಜಲ್ಲಿ ಕಲ್ಲುಗಳು ಹೊರ ಬಂದು ವಾಹನ ಸವಾರರನ್ನು ಹಾಗೂ ವ್ಯವಸ್ಥೆಯ ದುರಾವಸ್ಥೆ ಕಂಡು ಹಲ್ಲು ಕಿಸಿಯುವಂತೆ ಕಂಡು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka