ಸಹಾಯಕ ಹಾಗೂ ಪರಿಚಾರಕ ಹುದ್ದೆಗಳ ನೇಮಕಾತಿ : PUC ಪಾಸಾದವರು ಅರ್ಜಿ ಸಲ್ಲಿಸಿ - Mahanayaka
4:00 PM Saturday 14 - December 2024

ಸಹಾಯಕ ಹಾಗೂ ಪರಿಚಾರಕ ಹುದ್ದೆಗಳ ನೇಮಕಾತಿ : PUC ಪಾಸಾದವರು ಅರ್ಜಿ ಸಲ್ಲಿಸಿ

RCF Recruitment
14/12/2024

RCF Recruitment 2024 – Rashtriya Chemicals and Fertilizers Limited (RCFL), ನಿಗಮದಲ್ಲಿ ಖಾಲಿ ಇರುವಂತಹ ವಿವಿಧ 378 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ನ ಬಗ್ಗೆ:

ಇದು ಕೇಂದ್ರ ಸರ್ಕಾರದ ಆಡಳಿತದಲ್ಲಿ ಒಂದು ಪ್ರತಿಷ್ಟಿತ, ಪ್ರಮುಖ ರಸಗೊಬ್ಬರ ಹಾಗೂ ರಾಸಾಯನಿಕಗಳ ಉತ್ಪಾದನಾ ಕಂಪನಿಯಾಗಿದೆ. ಈ ಕಂಪನಿಯ ಶೇ. 75 ರಷ್ಟು ಷೇರುಗಳನ್ನು ಸರ್ಕಾರವು ಹೊಂದಿದೆ. ಈ ಕಂಪನಿಗೆ 2023ರಲ್ಲಿ “ನವರತ್ನ” ಸ್ಥಾನಮಾನವನ್ನು ಕೂಡ ನೀಡಲಾಗಿದೆ. ಇಂತಹ ಒಂದು ಪ್ರತಿಷ್ಟಿತ ನವರತ್ನ ಕಂಪನಿಯಲ್ಲಿ ಉದ್ಯೋಗ ಅವಕಾಶವಿದೆ.

ಯಾವಾಗ ಹುದ್ದೆಗಳು ಖಾಲಿ ಇವೆ :

ಪ್ರಸ್ತುತ ಈ ನೇಮಕಾತಿಯಲ್ಲಿ ವಿವಿಧ ವಿಭಾಗಗಳ ಒಟ್ಟು 378 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅಕೌಂಟ್ ಎಕ್ಸಿಕ್ಯೂಟಿವ್, ಕಾರ್ಯದರ್ಶಿ ಸಹಾಯಕ, ಅಟೆಂಡೆಂಟ್ ಆಪರೇಟರ್, ಲ್ಯಾಬ್ ಸಹಾಯಕ, ತೋಟಗಾರಿಕೆ ಸಹಾಯಕ ಹಾಗೂ ವಿವಿಧ ವಿಭಾಗಗಳ ತಂತ್ರಜ್ಞ ಆಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆ:

ಈ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅದೇ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧ ಪಟ್ಟ ವಿಷಯದಲ್ಲಿ ಡಿಪ್ಲೋಮಾ ಮುಗಿಸಿದವರು, ದ್ವಿತೀಯ ಪಿಯುಸಿ ಪಾಸಾದವರು ಹಾಗೂ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅದೇ ರೀತಿ ವಯೋಮಿತಿಯ ಅರ್ಹತೆ ನೋಡುವುದಾದರೆ ಗರಿಷ್ಟ 25 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು:

* ಆನ್ಲೈನ್ ಅರ್ಜಿ ಸಲ್ಲಿಕೆಗೆ ಆರಂಭವಾದ ದಿನಾಂಕ – ಡಿಸೆಂಬರ್ 10, 2024

* ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – ಡಿಸೆಂಬರ್ 24, 2024

ಅರ್ಜಿ ಸಲ್ಲಿಸುವ ಅಧಿಕೃತ ಜಾಲತಾಣದ ಲಿಂಕ್: https://ors.rcfltd.com/3054/Position/APTREC-2024/ORS/

 


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ