ರಾಷ್ಟ್ರೀಯ ಲಾಂಛನ ಮುಖಭಾವ ವಿವಾದ: ಶಿಲ್ಪಿ ನೀಡಿದ ಸ್ಪಷ್ಟನೆ ಏನು? - Mahanayaka

ರಾಷ್ಟ್ರೀಯ ಲಾಂಛನ ಮುಖಭಾವ ವಿವಾದ: ಶಿಲ್ಪಿ ನೀಡಿದ ಸ್ಪಷ್ಟನೆ ಏನು?

rashtriya lanchana
14/07/2022

ನವದೆಹಲಿ: ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದು, ಲಾಂಛನದಲ್ಲಿರುವ ಸಿಂಹಗಳ ಮುಖಭಾವದ ಕುರಿತು ವಿವಾದ ಸೃಷ್ಟಿಯಾಗಿದ್ದು, ದೇಶಾದ್ಯಂತ ಇದು ಭಾರೀ ಚರ್ಚೆಗಳಿಗೆ ಕಾರಣವಾಗಿದೆ.


Provided by

ಸಿಂಹಗಳ ಮುಖಭಾವದಲ್ಲಿ ಅತಿಯಾದ ವ್ಯಗ್ರತೆ ಸೃಷ್ಟಿಸಲಾಗಿದೆ. ಇದನ್ನು ಬೇಕಂತಲೇ ಈ ರೀತಿಯಾಗಿ ಸೃಷ್ಟಿಸಿ ಮೂಲ ಲಾಂಛನಕ್ಕೆ ಧಕ್ಕೆ ತರಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಇದಲ್ಲದೇ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಆಹ್ವಾನಿಸಿಲ್ಲ ಎನ್ನುವ ಆಕ್ಷೇಪವೂ ಕೇಳಿ ಬಂದಿವೆ.

ಇನ್ನೂ ಈ ಲಾಂಛನದ ಶಿಲ್ಪಿ ಸುನಿಲ್ ಡಿಯೋರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಾಂಛನದಲ್ಲಿನ ಸಿಂಹಗಳು ವಾರಣಾಸಿ ಬಳಿಯ ಸಾರಾನಾಥದಲ್ಲಿರುವ ಅಶೋಕ ಸ್ಥಂಭದ ಮೇಲಿನ ಸಿಂಹಗಳನ್ನೇ ಹೋಲುತ್ತವೆ. ಅಲ್ಲಿರುವ ಸಿಂಹಗಳ ಗಾತ್ರಕ್ಕೂ ನೂತನ ಸಂಸತ್ ಭವನದ ಮೇಲಿನ ಬೃಹತ್ ಲಾಂಛನದ ಸಿಂಹಗಳ ಗಾತ್ರಕ್ಕೂ ಭಾರಿ ವ್ಯತ್ಯಾಸವಿದ್ದು, ಆದರೂ ಕೂಡ ಸಿಂಹಗಳ ಮುಖಭಾವದಲ್ಲಿ ಸಾಮ್ಯತೆ ಕಾಪಾಡಿಕೊಳ್ಳಲಾಗಿದೆ. ತದ್ರೂಪು ಬರುವಂತೆ ನೋಡಿಕೊಳ್ಳಲಾಗಿದ್ದು, ಮನಬಂದಂತೆ ಯಾವುದೇ ಮಾರ್ಪಾಡು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ