ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖಭಾವ ವಿವಾದ: ರಾಷ್ಟ್ರೀಯ ಲಾಂಛನಕ್ಕೆ ಅಪಮಾನದ ಆರೋಪ - Mahanayaka
10:26 AM Wednesday 22 - January 2025

ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖಭಾವ ವಿವಾದ: ರಾಷ್ಟ್ರೀಯ ಲಾಂಛನಕ್ಕೆ ಅಪಮಾನದ ಆರೋಪ

ashoka lanchana
13/07/2022

ನವದೆಹಲಿ: ಹೊಸ ಪಾರ್ಲಿಮೆಂಟ್ ಕಟ್ಟಡದ ಮೇಲಿನ ರಾಷ್ಟ್ರ ಲಾಂಛವನ್ನು ಪ್ರಧಾನಿ ಮೋದಿ ಸೋಮವಾರ ಅನಾವರಣಗೊಳಿಸಿದರು. ಆದರೆ ಅಶೋಕಸ್ತಂಭದ ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರೀಯ ಲಾಂಛನದ ‘ಸ್ವರೂಪ’ ಈಗ ವಿವಾದಕ್ಕೆ ಕಾರಣವಾಗಿದೆ.

‘ನರೇಂದ್ರ ಮೋದಿಯವರೇ, ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖಭಾವವನ್ನು ಗಮನಿಸಿ. ಇದು, ಸಾರಾನಾಥ್‌ ಸಂಗ್ರಹಾಲಯದ ಪ್ರತಿಮೆ (ಬುದ್ಧನ ಪ್ರತಿಮೆ) ಮುಖಭಾವ ಬಿಂಬಿಸುವುದೋ ಅಥವಾ ಗಿರ್ ಅರಣ್ಯದಲ್ಲಿನ ಸಿಂಹದ ಮುಖಭಾವವನ್ನೋ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ

‘ಹಿತಭಾವ, ಘನತೆ, ಆತ್ಮವಿಶ್ವಾಸದ ಪ್ರತೀಕವಾಗಿದ್ದ’ ಸಿಂಹಗಳ ಮುಖಭಾವಕ್ಕೆ ಬದಲಾಗಿ, ‘ಕೇಡುಂಟು ಮಾಡುವ, ಆಕ್ರಮಣ ಶೈಲಿ’ಯ ಮುಖಭಾವ ಇರುವಂತೆ ಲಾಂಛನವಿದೆ ಎಂದು ಪ್ರತಿಪಕ್ಷಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

ಗಂಭೀರ ಮುಖಭಾವವಿದ್ದ ಅಶೋಕಸ್ತಂಭದ ಸಿಂಹಗಳ ಮುಖವಿದ್ದ ರಾಷ್ಟ್ರೀಯ ಲಾಂಛನಕ್ಕೆ ಈ ಮೂಲಕ ಅಪಮಾನ ಮಾಡಲಾಗಿದೆ. ಎಡಗಡೆ ಇರುವುದು ಅಸಲಿ: ಘನತೆ, ಆತ್ಮವಿಶ್ವಾಸ ಬಿಂಬಿಸಲಿದೆ. ಬಲಗಡೆ ಇರುವುದು, ಮೋದಿ ಆವೃತ್ತಿಯದು. ‘ಗುರ್‌ ಎನ್ನುವಂತಿರುವ, ಅನಗತ್ಯವಾಗಿ ಆಕ್ರಮಣ ಶೈಲಿ ಬಿಂಬಿಸುವ ಲಾಂಛನ’. ನಾಚಿಕೆ ಆಗಬೇಕು. ತಕ್ಷಣ ಇದನ್ನು ಬದಲಿಸಿ’ ಎಂದು ಜವಹರ್‌ ಸಿರ್ಕಾರ್ ಟ್ವೀಟ್ ಮಾಡಿದ್ದಾರೆ.

‘ದಯವಿಟ್ಟು ಒಮ್ಮೆ ಗಮನಿಸಿ. ಸಾಧ್ಯವಿದ್ದರೆ ಸರಿಪಡಿಸಿ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಾಗಿರುವ ಅಧೀರ್‌ ರಂಜನ್‌ ಚೌಧುರಿ ಕೂಡ ಟ್ವೀಟ್ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ