ರಷ್ಯಾ ಆಕ್ರಮಣ ಆರಂಭ: ಉಕ್ರೇನ್​ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ - Mahanayaka
10:14 AM Thursday 12 - December 2024

ರಷ್ಯಾ ಆಕ್ರಮಣ ಆರಂಭ: ಉಕ್ರೇನ್​ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ

russia
24/02/2022

ಮಾಸ್ಕೋ: ಉಕ್ರೇನ್​ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬಳಿಕ ಆ ರಾಷ್ಟ್ರದ ಹಲವೆಡೆ ಸ್ಫೋಟದ ಸದ್ದು ಕೇಳಿ ಬಂದಿದೆ. ಇದರ ಜೊತೆಗೆ, ಉಕ್ರೇನ್​ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಹಿಂದೆಂದೂ ಕಂಡರಿಯದ ಪರಿಣಾಮಗಳನ್ನು ಇದರಲ್ಲಿ ಭಾಗಿಯಾಗುವ ರಾಷ್ಟ್ರಗಳು ಎದುರಿಸಬೇಕಾಗುತ್ತದೆ ಎಂದೂ ಗುಡುಗಿದ್ದರು. ಇದೀಗ ಉಕ್ರೇನ್​ನ ರಾಜಧಾನಿ ಕೀವ್​ ಮತ್ತು ಹಲವು ನಗರಗಳಲ್ಲಿ ರಷ್ಯಾ ಪಡೆಗಳು ಕ್ಷಿಪಣಿ​ ದಾಳಿ ನಡೆಸಿವೆ.

ಕೀವನ್​ ಮಧ್ಯಭಾಗದಲ್ಲಿ ವಾಯುದಾಳಿಯ ಸೈರನ್​ಗಳು ಮೊಳಗಿದ ಬಗ್ಗೆಯೂ ವರದಿಯಾಗಿವೆ. ರಷ್ಯಾ ಇದೀಗ ಉಕ್ರೇನ್​ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದೆ. ಉಕ್ರೇನ್​ ನಗರಗಳಲ್ಲಿ ರಷ್ಯಾ ಪಡೆಗಳು ಆವರಿಸಿಕೊಂಡಿವೆ ಎಂದು ವಿದೇಶಾಂಗ ಇಲಾಖೆ ಟ್ವೀಟ್​ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು; 6 ತಿಂಗಳ ಬಳಿಕ ಆರೋಪಿ ಬಂಧನ

ನವವಿವಾಹಿತೆ ಟೆಕ್ಕಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಆರೋಪ

ರಷ್ಯಾ ವಿರುದ್ಧ ಪ್ರತಿದಾಳಿ: ಐದು ವಿಮಾನ, ಒಂದು ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್’

ನಟ ಚೇತನ್ ಬಂಧನ ವಿಚಾರ: ಪೊಲೀಸರ ನಡೆ ಅನುಮಾನಾಸ್ಪದವಾಗಿದೆ; ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

 

ಇತ್ತೀಚಿನ ಸುದ್ದಿ