ರಷ್ಯಾ ದಾಳಿ: 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಸಾವು; ಉಕ್ರೇನ್‌ - Mahanayaka

ರಷ್ಯಾ ದಾಳಿ: 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಸಾವು; ಉಕ್ರೇನ್‌

ukren war death
28/02/2022

ಉಕ್ರೇನ್: ರಷ್ಯಾದ ಆಕ್ರಮಣಕಾರಿ ದಾಳಿಯಿಂದ 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ತಮಾಹಿತಿ ನೀಡಿದೆ.

ರವಿವಾರ ಉಕ್ರೇನ್​ ಸಚಿವಾಲಯ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿಯಲ್ಲಿ 1,684 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಆದರೆ, ತನ್ನ ಸಶಸ್ತ್ರ ಪಡೆಗಳ ಸಾವುನೋವುಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ.ತಮ್ಮ ಪಡೆಗಳು ಉಕ್ರೇನಿಯನ್ ಮಿಲಿಟರಿಯನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ ಎಂದು ಹೇಳಿರುವ ರಷ್ಯಾ, ಉಕ್ರೇನ್‌ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದಿದೆ.

ಅದೇ ರೀತಿ ರಷ್ಯಾದ ರಕ್ಷಣಾ ಸಚಿವಾಲಯವು ಸೂಕ್ತ ಅಂಕಿಅಂಶಗಳನ್ನು ನೀಡದೆ, ನಮ್ಮ ಸೈನಿಕರು ಸಹ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದಷ್ಟೇ ಮಾಹಿತಿ ನೀಡಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗಾಂಜಾ ಮಾರಾಟ: ಆರೋಪಿ ಬಂಧನ

ಮದ್ಯದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಬಂಧನ, ಬಿಡುಗಡೆ

ಉಕ್ರೇನ್ ​ನಿಂದ ಭಾರತಕ್ಕೆ ಬಂದಿಳಿದ 5ನೇ ವಿಮಾನ: 249 ಭಾರತೀಯರ ರಕ್ಷಣೆ

ರಷ್ಯಾ ವಿರುದ್ಧ ಉಕ್ರೇನ್‌ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ

70 ದಂಪತಿಗಳಿಗೆ ವಂಚಿಸಿದ ನಕಲಿ ವೈದ್ಯೆ: ಮಕ್ಕಳಾಗಲು ಔಷಧಿ ಪಡೆದ ಮಹಿಳೆ ಸ್ಥಿತಿ ಗಂಭೀರ

 

ಇತ್ತೀಚಿನ ಸುದ್ದಿ