10:59 AM Wednesday 12 - March 2025

ಉಕ್ರೇನ್ ಮೇಲೆ ರಷ್ಯಾ ದಾಳಿ: ಕನ್ನಡಿಗ ನವೀನ್ ಮೃತದೇಹ ಪತ್ತೆ

naveen
02/03/2022

ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಖಾರ್ಕೀವ್‍ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ.

ನವೀನ್ ಮೃತದೇಹದ ಫೋಟೋವನ್ನು ಅವರ ಸ್ನೇಹಿತರಿಗೆ ಕಳುಹಿಸಲಾಗಿದೆ. ಈ ಫೋಟೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಖಾರ್ಕಿವ್‌ನಲ್ಲಿ ನವೀನ್ ಮೃತದೇಹ ಇದ್ದು, ಇಂದು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಕ್ರೇನ್ ರಾಯಭಾರಿ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ವಾಪಸ್ ತರಲು ಯತ್ನ ಮಾಡಲಾಗುತ್ತಿದೆ. ಅಧಿಕಾರಿಗಳ ಹಂತದಲ್ಲಿ ಮಾತುಕತೆ ಈಗಾಗಲೇ ನಡೆದಿದ್ದು, ಖಾರ್ಕಿವ್‌ನಿಂದ ಇಂದು ಗಡಿಗೆ ರಸ್ತೆ ಮಾರ್ಗವಾಗಿ ಮೃತ ದೇಹ ಸಾಗಿಸುವ ಸಾಧ್ಯತೆ ಇದೆ.‌

ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ರವಾನಿಸಲು ಚಿಂತನೆ ನಡೆಸಲಾಗಿದ್ದು, ದೆಹಲಿ ಮೂಲಕ ರಾಜ್ಯ ಸರ್ಕಾರಕ್ಕೆ ಒಪ್ಪಿಸಲು ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ಅಪಘಾತ; ತಂದೆ -ಮಗಳು ಸ್ಥಳದಲ್ಲೇ ಸಾವು

ಲಾಡ್ಜ್ ​ಗಳಲ್ಲಿ ಹೈಟೆಕ್​ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ

ಬದುಕಿರುವ ವಾಪಸ್ ಕರೆ ತರದೆ ಹೆಣಗಳನ್ನು ತರುತ್ತಿದ್ದಾರೆ: ಡಿ.ಕೆ.ಶಿವಕುಮಾರ್​

ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ: ಮೃತ ನವೀನ್ ತಂದೆ ಶೇಖರಗೌಡ

ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಭೀಕರ ಹತ್ಯೆ

 

 

ಇತ್ತೀಚಿನ ಸುದ್ದಿ

Exit mobile version