ರಷ್ಯಾ ಸೇನೆಯಿಂದ ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆ ಧ್ವಂಸ
ಕೀವ್: ರಷ್ಯಾ-ಉಕ್ರೇನ್ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ಸೇನೆಯು ಉಕ್ರೇನ್‍ನ 202 ಶಾಲೆ ಮತ್ತು 34 ಆಸ್ಪತ್ರೆಗಳನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.
ಕೀವ್ ನಗರದ 202 ಶಾಲೆ, 34 ಆಸ್ಪತ್ರೆ ಮತ್ತು 1,500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾ ಸೇನೆ ಧ್ವಂಸ ಮಾಡಿದೆ. ಅಲ್ಲದೇ ಉಕ್ರೇನ್ ನಲ್ಲಿರುವ 900ಕ್ಕೂ ಅಧಿಕ ವಸತಿ ಕಟ್ಟಡಗಳಲ್ಲಿ ನೀರು, ಕರೆಂಟ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ರಷ್ಯಾ ದಾಳಿಗೆ ಖಾರ್ಕೀವ್ ಸಂಪೂರ್ಣ ಸ್ಮಶಾನದಂತಾಗಿದ್ದು, ಇಂದು ಕೂಡ ಪೆಟ್ರೋಲ್ ಪ್ಲಾಂಟ್‍ಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದೆ.
ಇತ್ತ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್, ರಷ್ಯಾ ಸೇನಾ ವಾಹನಗಳ ಮೇಲೆ ಡ್ರೋಣ್ ದಾಳಿ ನಡೆಸುತ್ತಿದೆ. ಇತ್ತ ಉಕ್ರೇನ್ ನ 26ಕ್ಕೂ ಹೆಚ್ಚು ಯುದ್ಧ ವಾಹನಗಳು ಸಂಪೂರ್ಣ ನಾಶವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಂಬಂಧಿಕರ ಮನೆಗೆ ಬಂದಿದ್ದ ಯುವಕ ನೇಣಿಗೆ ಶರಣು
‘ಆಸ್ತಿ ವಿಚಾರ: ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ
ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಸೇನೆಗೆ ಸೇರುವ ಹಂಬಲ: ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ