ದೇಶದ ರಕ್ಷಣೆಗೆ ಬಂದೂಕು ಹಿಡಿದ ಉಕ್ರೇನ್ ಅಧ್ಯಕ್ಷ - Mahanayaka
7:45 AM Thursday 12 - December 2024

ದೇಶದ ರಕ್ಷಣೆಗೆ ಬಂದೂಕು ಹಿಡಿದ ಉಕ್ರೇನ್ ಅಧ್ಯಕ್ಷ

ukren pm
27/02/2022

ಉಕ್ರೇನ್ ದೇಶದ ನಾಗರೀಕರನ್ನು ರಷ್ಯಾ ವಿರುದ್ಧದ ಹೋರಾಟಕ್ಕೆ ಪ್ರೇರೇಪಿಸಲು ಸ್ವತಹ ಉಕ್ರೇನ್ ದೇಶದ ಅಧ್ಯಕ್ಷರೇ ಬಂದೂಕು ಹಿಡಿದು ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಉಕ್ರೇನ್‌ ನಲ್ಲಿ ನಡೆಯುತ್ತಿರುವ ಘಟನೆಗಳು ದೇಶಪ್ರೇಮದ ಕಿಚ್ಚು ಹೇಗೆ ಪ್ರತಿಯೊಬ್ಬರಲ್ಲಿ ಇದೇ ಎಂಬುದನ್ನು ಜಗತ್ತಿಗೆ ಸಾರಿ ಹೇಳುತ್ತಿವೆ.

ಅಲ್ಲದೆ, ಉಕ್ರೇನ್ ದೇಶದ ಪ್ರತಿಯೊಬ್ಬ ನಾಗರಿಕರು ನಾವು ಹೋರಾಟ ಮಾಡಿ ನಮ್ಮ ದೇಶವನ್ನು ಉಳಿಸಿಕೊಳ್ಳುತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೈಯಲ್ಲಿ ಗನ್ ಹಿಡಿದು ಕೆಲವು ನಾಗರಿಕರು ರಷ್ಯಾ ಸೇನೆಯ ವಿರುದ್ಧ ಹೋರಾಟಕ್ಕೆ ಮುಂದಾದರೆ, ಇನ್ನೂ ಕೆಲವರು ರಷ್ಯಾ ಸೈನ್ಯದ ವಿರುದ್ಧ ಎದುರು ನಿಂತು ದೇಶದ ವಿರುದ್ಧ ಆಕ್ರಮಣ ಮಾಡದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇತ್ತ ರಷ್ಯಾ ಆಕ್ರಮಣದಿಂದ ಕಂಗೆಟ್ಟು ಹೋಗಿರುವ ಉಕ್ರೇನ್, ತನ್ನ ದೇಶದ ನಾಗರೀಕರನ್ನು ಸೇನೆಗೆ ಸೇರಲು ಆಹ್ವಾನ ನೀಡಿದೆ. ಹೀಗಾಗಿ ಉಕ್ರೇನ್ ದೇಶದ ಪ್ರತಿಯೊಬ್ಬ ನಾಗರಿಕರು ಸೇನೆ ಸೇರಲು ಮುಂದಾಗುತ್ತಿದ್ದಾರೆ. ಅದೇ ರೀತಿ ಉಕ್ರೇನ್‌ನಲ್ಲಿ 80 ವರ್ಷದ ವೃದ್ಧ ಸೇನೆ ಸೇರಲು ಮುಂದಾಗಿ ಬ್ಯಾಗ್‌ನಲ್ಲಿ ಎರಡು ಶರ್ಟ್‌, 2 ಪ್ಯಾಂಟ್‌, ಸ್ಯಾಂಡ್ವಿಚ್‌ ಗಳು ಹಾಗೂ ಟೂತ್‌ ಬ್ರಷ್‌ನ್ನು ಮಾತ್ರ ಆತ ತೆಗೆದುಕೊಂಡು ಬಂದಿದ್ದಾನೆ. ತನ್ನ ಮೊಮ್ಮಕ್ಕಳ ರಕ್ಷಣೆಗಾಗಿ ಸೇನೆ ಸೇರಲು ಹೊರಟಿರುವುದಾಗಿ ತಿಳಿಸಿದ್ದಾನೆ. ಆತನಿಗಿರುವ ರಾಷ್ಟ್ರಪ್ರೇಮವನ್ನು ಎಲ್ಲರೂ ಮೆಚ್ಚುವಂತಾಗಿದೆ.

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ, ಉಕ್ರೇನ್ ದೇಶದ ಪ್ರತಿಯೊಬ್ಬ ಯೋಧರು ರಷ್ಯಾ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದ್ದಾರೆ.. ಹೀಗೆ ರಷ್ಯಾ ವಿರುದ್ಧ ಆಕ್ರಮಣ ತಡೆಯುವ ವೇಳೆ ಯೋಧನೊಬ್ಬ ರಷ್ಯಾ ಸೇನೆ ಸೇತುವೆ ದಾಟದಂತೆ ತನ್ನನ್ನೇ ತಾನು ಸ್ಪೋಟಿಸಿಕೊಂಡ ಘಟನೆ ನಡೆದಿದೆ.

ರಷ್ಯಾ ಸೇನೆ ಕ್ರೀಮಿಯಾ ಗಡಿಯಿಂದ ದಕ್ಷಿಣ ಖೋರ್ಸ ಪ್ರದೇಶಕ್ಕೆ ಹೆನಿಚೆಸ್ಕ್ ಬ್ರಿಡ್ಜಿ ಮೂಲಕ ಉಕ್ರೇನ್​ಗೆ ಪ್ರವೇಶ ಮಾಡಲು ಯತ್ನಿಸಿತ್ತು. ರಷ್ಯಾ ಸೇನೆಯನ್ನು ಪ್ರಯತ್ನವನ್ನು ವಿಫಲ ಮಾಡಲು ಉಕ್ರೇನ್​ನ ಮೆರೈನ್ ಬೆಟಾಲಿಯನ್​​ಗೆ ಸೇರಿದ ಕಕೂನ್ ವಿಟಾಲಿ ವೋಲೋಡಿಮೈರೋವಿಚ್ ಎಂಬ ಸೈನಿಕ ಆ ಬ್ರಿಡ್ಜ್​ ಮೇಲೆ ನೆಗೆದು ಮದ್ಧು ಗುಂಡುಗಳನ್ನಿಟ್ಟು ಸ್ಫೋಟಿಸಿದ್ದರು.

ಆ ಸಮಯದಲ್ಲಿ ಯೋಧ ಕೂಡ ಸೇತುವೆ ಮೇಲೆಯೇ ಇದ್ದ ಕಾರಣ ಆತ ಕೂಡ ಸ್ಪೋಟಕ ತೀವ್ರತೆಗೆ ಛಿದ್ರವಾಗಿದ್ದ. ಸೇತುವೆ ನಾಶವಾದ ಕಾರಣ ರಷ್ಯಾ ಸೇನೆ ಯುದ್ಧ ಟ್ಯಾಂಕರ್​ಗಳೊಂದಿಗೆ ಉಕ್ರೇನ್​ ಪ್ರವೇಶ ಮಾಡಲು ವಿಫಲವಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ದೇಶದ ರಕ್ಷಣೆಗೆ ಬಂದೂಕು ಹಿಡಿದ ಉಕ್ರೇನ್ ಅಧ್ಯಕ್ಷ

ಕಾರು-ಬುಲೆಟ್​ ಡಿಕ್ಕಿ: ಇಬ್ಬರ ಸ್ಥಳದಲ್ಲೇ ಸಾವು

ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣ: ಇಬ್ಬರು ಆರೋಪಿಗಳಿಗೆ ಶರತ್ತುಬದ್ಧ ಜಾಮೀನು

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ವೇಳೆ ವ್ಯಕ್ತಿ ಸಾವು: ಇಬ್ಬರ ಬಂಧನ

ಮನೆಯಲ್ಲಿ ಸಣ್ಣ ಫಿರಂಗಿ ಸ್ಫೋಟ: ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

 

ಇತ್ತೀಚಿನ ಸುದ್ದಿ