ರಷ್ಯಾದ 7000 ಯೋಧರ ಸಾವು: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ - Mahanayaka
3:32 AM Wednesday 5 - February 2025

ರಷ್ಯಾದ 7000 ಯೋಧರ ಸಾವು: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

jelaskin
03/03/2022

ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ದೇಶವೇ 7,000 ಯೋಧರನ್ನು ಕಳೆದುಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

ನಾವು ಕೇವಲ 1 ವಾರದಲ್ಲಿ ಶತ್ರುಗಳ ಯೋಜನೆಯನ್ನು ಬುಡಮೇಲು ಮಾಡಿದ್ದೇವೆ. ನಮ್ಮದೇ ಜನರ ಮೇಲೆ ವಿಷ ಬೀಜ ಬಿತ್ತಿ ದೇಶದ ವಿರುದ್ಧ ನಿಲ್ಲುವಂತೆ ರಷ್ಯಾ ಮಾಡಿತ್ತು. ನಮ್ಮ ಜನರಲ್ಲಿ ಸಹೃದಯತೆ ಹಾಗೂ ಸ್ವತಂತ್ರತೆಗಳೆಂಬ ಎರಡು ವಿಚಾರಗಳಿವೆ ಎಂದು ತಿಳಿಸಿದರು.

ರಷ್ಯಾ ಪಡೆ ಉಕ್ರೇನ್ ಪ್ರಮುಖ ನಗರಗಳನ್ನು ವಷಕ್ಕೆ ಪಡೆದುಕೊಂಡಿದ್ದರೂ ಅವರು ದಿಕ್ಕು ದೆಸೆ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ನಾವೀಗ ರಷ್ಯಾದ ಸೈನಿಕರನ್ನು ನಿಯಂತ್ರಿಸುತ್ತಿದ್ದೇವೆ. ಭದ್ರತಾ ಪಡೆ, ಸಿಬ್ಬಂದಿ, ಸ್ಥಳೀಯರು ಎಲ್ಲರೂ ಸೇರಿ ಅವರನ್ನು ಸೆರೆ ಹಿಡಿದು ಅವರಿಗೆ ನಾವು ತಿರುಗೇಟು ನೀಡುತ್ತಿದ್ದೇವೆ. ಅವರು ಏಕೆ ಇಲ್ಲಿದ್ದಾರೆ ಎಂಬ ಬಗ್ಗೆ ಗೊಂದಲ ಹೊಂದಿದ್ದಾರೆ. ಅವರು ಸಂಖ್ಯೆಯಲ್ಲಿ ನಮಗಿಂತ 10 ಪಟ್ಟು ಹೆಚ್ಚಿದ್ದರೂ ಅವರಲ್ಲಿ ಶಕ್ತಿಯಿಲ್ಲ ಎಂದು ಝೆಲೆನ್ಸ್ಕಿ ರಷ್ಯಾದ ಯೋಧರನ್ನು ಝೆಲೆನ್ಸ್ಕಿ ವ್ಯಂಗ್ಯ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಾ. 13ರಿಂದ ಬಿಎಸ್‌ ಪಿಯಿಂದ ವಿಭಾಗ ಮಟ್ಟದ ಜನಜಾಗೃತಿ ಸಮಾವೇಶ

ಬೆಂಕಿ ಅವಘಡ : ಪತಿ ಸಾವು, ಪತ್ನಿ ಗಂಭೀರ

ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ: ಕೇಂದ್ರದ ವಿರುದ್ಧ ಉಕ್ರೇನ್‌ ನಿಂದ ಮರಳಿದ ವಿದ್ಯಾರ್ಥಿಗಳು ಆಕ್ರೋಶ

ನಾಲ್ಕು ಮಂತ್ರಿಗಳು ಯಾರ ಹತ್ತಿರ ಮಾತಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ನವೀನ್ ಸಾವು: ಬಿಜೆಪಿ ನಾಯಕರಿಂದ ಅರ್ಥವಿಲ್ಲದ ಹೇಳಿಕೆ; ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ

 

ಇತ್ತೀಚಿನ ಸುದ್ದಿ