ರಷ್ಯಾದ ಬೃಹತ್ ಯುದ್ಧನೌಕೆಯನ್ನು ಸ್ಫೋಟಿಸಿದ ಉಕ್ರೇನ್ - Mahanayaka
4:09 AM Tuesday 12 - November 2024

ರಷ್ಯಾದ ಬೃಹತ್ ಯುದ್ಧನೌಕೆಯನ್ನು ಸ್ಫೋಟಿಸಿದ ಉಕ್ರೇನ್

ukraine
14/04/2022

ಮಾಸ್ಕೋ: ಕಪ್ಪು ಸಮುದ್ರದಲ್ಲಿ ನಿಯೋಜಿಸಲಾದ ರಷ್ಯಾದ ಬೃಹತ್ ಯುದ್ಧನೌಕೆಯನ್ನು  ಉಕ್ರೇನ್ ಸ್ಪೋಟಿಸಿದೆ.

ರಷ್ಯಾದ ಹಡಗಿನ ಮೇಲೆ ಕ್ಷಿಪಣಿಗಳಿಂದ ದಾಳಿ ಮಾಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.  ಹಡಗು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದನ್ನು ರಷ್ಯಾ ಖಚಿತಪಡಿಸಿದ್ದು, ಹಡಗಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಶಸ್ತ್ರಾಗಾರಕ್ಕೆ ವ್ಯಾಪಿಸಿದೆ ಎಂದು ರಷ್ಯಾದ ರಕ್ಷಣಾ ವಕ್ತಾರರು ಖಚಿತಪಡಿಸಿದ್ದಾರೆ.

ಹಡಗಿನಲ್ಲಿದ್ದ ಸೈನಿಕರು ಸೇರಿದಂತೆ 510 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾ ಹೇಳಿದೆ.  ಬೆಂಕಿಗೆ ಕಾರಣ ಏನೆಂದು ಹೇಳಲು ರಷ್ಯಾ ನಿರಾಕರಿಸಿದೆ.  ತನಿಖೆ ಆರಂಭವಾಗಿದೆ ಎಂದು ವಿವರಣೆ ನೀಡಿದ್ದಾರೆ.

ಆದಾಗ್ಯೂ, ನೆಪ್ಚೂನ್ ಕ್ಷಿಪಣಿಗಳಿಂದ ಹಡಗು  ನಾಶ ಮಾಡಲಾಗಿದೆ  ಎಂದು ಉಕ್ರೇನ್ ಹೇಳಿಕೊಂಡಿದೆ.  ದಾಳಿಯಲ್ಲಿ ಹಡಗು ಸ್ಫೋಟಗೊಂಡು ಮುಳುಗಿದೆ ಎಂದು ಒಡೆಸ್ಸಾ ಗವರ್ನರ್ ಕೂಡ  ಹೇಳಿದ್ದಾರೆ.




ಉಕ್ರೇನಿಯನ್ ಯುದ್ಧದ ಮೊದಲ ಹಂತದಲ್ಲಿ ಸ್ನೇಕ್ ಐಲ್ಯಾಂಡ್‌ನಲ್ಲಿ ಉಕ್ರೇನಿಯನ್ ಪಡೆಗಳ ಮೇಲೆ ದಾಳಿ ಮಾಡಲು ಈ ಹಡಗನ್ನು ರಷ್ಯಾ ಬಳಸಿತು.  ಕ್ಷಿಪಣಿ ಕಳುಹಿಸಿ ಯುದ್ಧ ನೌಕೆಯನ್ನು ಧ್ವಂಸಗೊಳಿಸಿದೆ ಎಂಬ ಉಕ್ರೇನ್ ಹೇಳಿಕೆ ನಿಜವಾದರೆ ರಷ್ಯಾಕ್ಕೆ ತೀವ್ರ ಮುಖಭಂಗವಾಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಷ್ಯಾ ಸೈನಿಕರ ಅತ್ಯಾಚಾರದ ಪರಿಣಾಮ ಗರ್ಭಿಣಿಯರಾದ 9 ಮಂದಿ ಉಕ್ರೇನ್ ಮಹಿಳೆಯರು

ಉಡುವಿನ ಮೇಲೆ ಲೈಂಗಿಕ ಕಿರುಕುಳ: ನಾಲ್ವರು ಆರೋಪಿಗಳ ಬಂಧನ

ಅಂಬೇಡ್ಕರ್ ಜಯಂತಿ ಪ್ರಯುಕ್ತ ಕನ್ನಡ ಸ್ಟೇಟಸ್ ಗಳು

ಹುಟ್ಟೂರಿಗೆ ತಲುಪಿದ ಹಿಂದೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಪಾರ್ಥಿವ ಶರೀರ

ನಿಂಬೆ ಹಣ್ಣಿನ ಬೆಲೆ ದಿಡೀರ್ ಏರಿಕೆ :100 ಕೆ.ಜಿಗೂ ಅಧಿಕ ನಿಂಬೆಹಣ್ಣು ಕಳವು

 

ಇತ್ತೀಚಿನ ಸುದ್ದಿ