ರಷ್ಯಾಕ್ಕೆ ಮತ್ತೊಂದು ನಷ್ಟ: ಮೇಜರ್ ಜನರಲ್ ವಿಟಾಲಿ ಗೆರಾಸಿವೊವ್ ಸಾವು - Mahanayaka

ರಷ್ಯಾಕ್ಕೆ ಮತ್ತೊಂದು ನಷ್ಟ: ಮೇಜರ್ ಜನರಲ್ ವಿಟಾಲಿ ಗೆರಾಸಿವೊವ್ ಸಾವು

russian ukraine war
08/03/2022

ಕೀವ್: ಖಾರ್ಕಿವ್ ಯುದ್ಧದಲ್ಲಿ ರಷ್ಯಾದ ಜನರಲ್ ವಿಟಾಲಿ ಗೆರಾಸಿವೊವ್ ಸಾವನ್ನಪ್ಪಿದ್ದು, ಹಿರಿಯ ಕಮಾಂಡರ್ ನ್ನು ಬಲಿ  ಪಡೆಯುವ ಮೂಲಕ ಉಕ್ರೇನ್ ರಷ್ಯಾಕ್ಕೆ ಮತ್ತೊಂದು ಆಘಾತವನ್ನು ನೀಡಿದೆ.

ರಷ್ಯಾದ 7ನೇ ವಾಯು ಸೇನೆ ವಿಭಾಗದ ಕಮಾಂಡಿಗ್ ಜನರಲ್ ಆಂಡ್ರೆ ಸುಖೋವೆಟ್ಸ್ಕಿ ಮತ್ತು 41ನೇ ಕಂಬೈನ್ಸ್ ಆರ್ಮ್ಸ್ ಆರ್ಮಿಯ ಉಪ ಕಮಾಂಡರ್ ಸ್ನೈಪರ್ ಮೃತಪಟ್ಟ ಬಳಿಕ ಇದೀಗ ವಿಟಾಲಿ ಗೆರಾಸಿಮೊವ್ ಸಾವನ್ನಪ್ಪಿದ್ದಾರೆ.

ಮೇಜರ್ ಜನರಲ್ ವಿಟಾಲಿ ಗೆರಾಸಿವೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದರು. ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ  ವಿಟಾಲಿ ಗೆರಾಸಿವೊವ್ ಪಾತ್ರವಿತ್ತು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ