ರಸ್ತೆ ಅಪಘಾತಕ್ಕೆ ಕರ್ತವ್ಯ ನಿರತ ಅರಣ್ಯಾಧಿಕಾರಿ ಸಾವು
ಶಿವಮೊಗ್ಗ: ಕರ್ತವ್ಯ ನಿರತ ಅರಣ್ಯಾಧಿಕಾರಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಬಳಿ ನಡೆದಿದೆ.
ಸಾಗರ ವಲಯ ತ್ಯಾಗರ್ತಿಯ ಉಪವಲಯ ಅರಣ್ಯಾಧಿಕಾರಿ ಲೋಕನಾಥ್ ಮೃತರು. ಶನಿವಾರ ಕರ್ತವ್ಯಕ್ಕೆಂದು ತೆರಳುವಾಗ ಬೈಕ್ನಿಂದ ಬಿದ್ದ ಲೋಕನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರು ಸಾಗರದ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ಅವರನ್ನು ರವಾನೆ ಮಾಡಲಾಗಿತ್ತು. ಇಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು
ಕೊವಿಡ್ ನಿಯಮ: ತನ್ನ ಮದುವೆಯನ್ನೇ ರದ್ಧುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ
“ಮಾಯಾವತಿ ಮಂಕಾದರೆ? ಚುನಾವಣೆ ಸಮೀಪಿಸಿದರೂ ಪ್ರಚಾರ ಮಾಡುತ್ತಿಲ್ಲ”!
ಮನೆ ಕಟ್ಟಲು ಬಿಡದ ಪಿಡಿಒ: ಹೈಟೆನ್ಶನ್ ಕಂಬವೇರಿ ರೈತ ಆತ್ಮಹತ್ಯೆಗೆ ಯತ್ನ
ಪೊಲೀಸ್ ಮಾಹಿತಿದಾರನನ್ನು ಕೊಂದು, ಮೂರು ವಾಹನಕ್ಕೆ ಬೆಂಕಿಯಿಟ್ಟ ನಕ್ಸಲರು!