ಬಸ್ ನಿಂದ ಇಳಿದು ರಸ್ತೆ ದಾಟುವಷ್ಟರಲ್ಲೇ ತಾಯಿ, ಮಗಳಿಗೆ ಡಿಕ್ಕಿ ಹೊಡೆದಿತ್ತು ಕಾರು! | ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿತ್ತು ಪ್ರಾಣ!
ತುಮಕೂರು: ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ತಾಯಿ ಮತ್ತು ಮಗಳಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ತಾಯಿ ಮಗಳು ಇಬ್ಬರೂ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
ಕಳ್ಳಂಬೆಳ್ಳ ನಿವಾಸಿಗಳಾದ 45 ವರ್ಷ ವಯಸ್ಸಿನ ಶಾರದಮ್ಮ ಹಾಗೂ ಅವರ ಪುತ್ರಿ 20 ವರ್ಷ ವಯಸ್ಸಿನ ಕವಿತಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ಶಿರಾಕ್ಕೆ ಹೋಗಿದ್ದ ತಾಯಿ ಮಗಳು ವಾಪಸ್ ಊರಿಗೆ ಬಂದು ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಏಕಾಏಕಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಅಪಘಾತದ ಪರಿಣಾಮ ತಾಯಿ ಶಾರದಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗಳು ಕವಿತಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇಬ್ಬರ ಸಾವಿಗೆ ಕಾರಣವಾಗಿರುವ ಕಾರು ಚಾಲಕ ಮಾತ್ರ ಕಾರು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಬಸ್ ನಿಂದ ಇಳಿದ ಬಳಿಕ ರಸ್ತೆ ದಾಡುವ ಸಂದರ್ಭದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು. ಬಹಳಷ್ಟು ಬಾರಿಗೆ ಬಸ್ ನಿಂದ ಇಳಿದ ತಕ್ಷಣವೇ ಕೆಲವರು, ಸ್ವಲ್ಪವೂ ಗಮನಿಸದೇ ಏಕಾಏಕಿ ರಸ್ತೆ ದಾಟಿ ಬಿಡುತ್ತಾರೆ. ಬಸ್ ನಿಂತಿದೆ ಎಂದು ತಿಳಿದಿದ್ದರೂ ಕೆಲವು ವಾಹನ ಚಾಲಕರು ತೀವ್ರ ನಿರ್ಲಕ್ಷ್ಯವಾಗಿ ವಾಹನ ಚಲಾಯಿಸುತ್ತಾರೆ. ಹೀಗಾಗಿ ರಸ್ತೆ ದಾಡುತ್ತಿರುವವರು ಬಲಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ. ಹಾಗಾಗಿ ರಸ್ತೆ ದಾಟುವ ವೇಳೆ ಯಾವುದೇ ಕಾರಣಕ್ಕೆ ಸಾರ್ವಜನಿಕರು ತೀವ್ರವಾಗಿ ಎಚ್ಚರಿಕೆ ವಹಿಸಬೇಕು.
ಇನ್ನಷ್ಟು ಸುದ್ದಿಗಳು…
ಕರ್ಮಠ ಮತಾಂಧತೆಯೂ ತಾಲಿಬಾನ್ ಸಂಸ್ಕೃತಿಯೂ | ನಾ ದಿವಾಕರ
ಜಾತಿ ತಾರತಮ್ಯ ನಿರ್ಮೂಲನೆ ಮಾಡುವ ಗ್ರಾಮಕ್ಕೆ 10 ಲಕ್ಷ ರೂಪಾಯಿ ಬಹುಮಾನ!
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ
ಡಾಬಾದಲ್ಲಿ ಊಟ ಮುಗಿಸಿ, ಬೈಕ್ ಹತ್ತಿದ ಸ್ನೇಹಿತರಿಬ್ಬರು ಕ್ಷಣ ಮಾತ್ರದಲ್ಲೇ ಸಾವು!
“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ
ವಾನರ ಸೇನೆಯ ದಾಳಿ: ಎರಡನೇ ಮಹಡಿಯಿಂದ ಬಿದ್ದು ಬಿಜೆಪಿ ನಾಯಕನ ಪತ್ನಿ ಸಾವು
2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?
ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ