ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ನಡಿಗೆ ಬಿದ್ದ ಯುವತಿ - Mahanayaka
3:19 AM Wednesday 11 - December 2024

ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ನಡಿಗೆ ಬಿದ್ದ ಯುವತಿ

bangalore road
08/10/2021

ಬೆಂಗಳೂರು:  ಜನರು ರಾಜಕೀಯ ಸಂತೆಯಲ್ಲಿ ಮೈಮರೆತಿದ್ದರೆ, ಇತ್ತ ರಸ್ತೆಗಳ ಡಾಂಬಾರು ಕಿತ್ತು ಹೋಗಿ ಮೃತ್ಯು ಕೂಪವಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬಂದರೂ ಸಂಬಂಧಪಟ್ಟವರು ಇನ್ನೂ ನಿದ್ದೆಯಿಂದ ಎದ್ದಿಲ್ಲ.  ಈ ನಡುವೆ ಮಹಿಳೆಯೊಬ್ಬರು ರಸ್ತೆ ದುರಂತಕ್ಕೆ ಬಲಿಯಾಗಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಚಲಾಯಿಸುತ್ತಾ ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದ ಯುವತಿ ಟಿಪ್ಪರ್ ಲಾರಿಯಡಿಗೆ ಬಿದ್ದ ದಾರುಣವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಒಂದೇ ಕುಟುಂಬದ ಮೂವರು ಪ್ರಯಾಣಿಸುತ್ತಿದ್ದರು. ರಸ್ತೆ ಗುಂಡಿಯನ್ನು ಕಂಡು ವಾಹನವನ್ನು ಯುವತಿ ಪಕ್ಕಕ್ಕೆ ತಿರುಗಿಸಿದ್ದು, ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ನಡಿಗೆ ಅವರು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನುಬಿಯಾ ಎಂಬವರು ಮೃತಪಟ್ಟವರು ಎಂದು ಹೇಳಲಾಗಿದ್ದು, 15 ವರ್ಷ ವಯಸ್ಸಿನ ಆಫ್ರೀನ್ ಮತ್ತು ಅರ್ಹಾನ್ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮೊನ್ನೆಯಷ್ಟೇ ಇದೇ ರಸ್ತೆಯಲ್ಲಿ ಟಿಪ್ಪರ್ ಹರಿದು ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. ಆದರೂ ರಸ್ತೆಯನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಇದೀಗ ಮತ್ತೊಂದು ಅಪಘಾತದಲ್ಲಿ ಯುವತಿಯೊರ್ವರು ಸಾವಿಗೀಡಾಗಿದ್ದಾರೆ. ರಸ್ತೆ ಸರಿಪಡಿಸಬೇಕಾದರೆ, ಇನ್ನೆಷ್ಟು ಜೀವಗಳ ಬಲಿ ಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಮದುವೆಯಾದ ಬಳಿಕ ನರಕ ತೋರಿಸಿದ ಪತಿ | ಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಮಹಿಳೆ

ಆತ್ಮಹತ್ಯೆ ಮಾಡುವುದಾಗಿ ಶಿವಮೊಗ್ಗದಿಂದ ನಾಪತ್ತೆಯಾಗಿದ್ದ ನೌಕರ ಧರ್ಮಸ್ಥಳದಲ್ಲಿ ಪತ್ತೆ!

ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಕಾರ್ಯಕಾರಿಣಿಯಿಂದ ಗೇಟ್ ಪಾಸ್ ನೀಡಿದ ಬಿಜೆಪಿ!

ತನ್ನನ್ನು ಸಾಕಿದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗೊರಿಲ್ಲ: ನೆಟ್ಟಿಗರ ಹೃದಯ ಕರಗಿಸಿದ ಫೋಟೋ

RSS ಶಿಕ್ಷಣ ನೀಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು | ಬಿಜೆಪಿಗರಿಗೆ ಕುಮಾರಸ್ವಾಮಿ ತಿರುಗೇಟು

ಹಾವಿನ ಜೊತೆ ಡಾನ್ಸ್: ಸಣ್ಣ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ವೃದ್ಧ

ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ:  ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು

ಇತ್ತೀಚಿನ ಸುದ್ದಿ