ರಸ್ತೆ ಕಾಮಗಾರಿಯ ಗುಂಡಿಗೆ ಬಿದ್ದು ಬಿಜೆಪಿ ಮುಖಂಡ ದಾರುಣ ಸಾವು - Mahanayaka
10:44 AM Thursday 11 - September 2025

ರಸ್ತೆ ಕಾಮಗಾರಿಯ ಗುಂಡಿಗೆ ಬಿದ್ದು ಬಿಜೆಪಿ ಮುಖಂಡ ದಾರುಣ ಸಾವು

madesh
29/09/2021

ಆನೇಕಲ್: ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಬಿಜೆಪಿ ಮುಖಂಡ ರಸ್ತೆ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಆನೇಕಲ್ ನ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದ್ದು, ಗುತ್ತಿಗೆಗಾರನ ನಿರ್ಲಕ್ಷ್ಯಕ್ಕೆ ಜೀವವೊಂದು ಬಲಿಯಾಗಿದೆ.


Provided by

50 ವರ್ಷ ವಯಸ್ಸಿನ ಸಬ್‌ ಮಂಗಲ ನಿವಾಸಿ ಮಾದೇಶ್ ಮೃತಪಟ್ಟ ಬೈಕ್ ಸವಾರರಾಗಿದ್ದು, ಗುತ್ತಿಗೆದಾರ ರಸ್ತೆ ಕಾಮಗಾರಿಗೆ ಹೊಂಡ ತೋಡಿದ್ದರು. ಆದರೆ ಕೆಲಸ ಪೂರ್ಣಗೊಳಿಸದೆ ಗುಂಡಿಯನ್ನು ಹಾಗೆಯೇ ಬಿಟ್ಟುಹೋಗಿದ್ದರು ಎನ್ನಲಾಗಿದೆ. ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭ ಆದಾಗಿಂದ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಬೇಕೆಂದು ಸಹ ಧರಣಿ ನಿರತರು ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ರಾಜ್ಯದಲ್ಲಿ ಮತ್ತೊಂದು ದಲಿತ ದೌರ್ಜನ್ಯ: ಬೆಳ್ಳಂಬೆಳಗ್ಗೆ  ದಲಿತರ ಗುಡಿಸಲುಗಳನ್ನು ಧ್ವಂಸ ಮಾಡಿದ ಅಧಿಕಾರಿಗಳು

ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಮೋದೀಜಿಯ ಪ್ರವಾಸದ ಬಗ್ಗೆ ಯಾವುದೇ ವರದಿ ಪ್ರಕಟವಾಗಿಲ್ಲ, ವೈರಲ್ ಫೋಟೋ: ಫೇಕ್ ಪತ್ರಿಕೆ ಸ್ಪಷ್ಟನೆ

ಸಿದ್ದರಾಮಯ್ಯನವರೇ ದೊಡ್ಡ ಭಯೋತ್ಪಾದಕ ಅನ್ನಿಸುತ್ತಿದೆ | ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

“ದೇವಸ್ಥಾನ ತೆರವಿಗೆ ಆದೇಶ ನೀಡಿದ್ದು ಜಿಲ್ಲಾಧಿಕಾರಿ, ವರ್ಗಾವಣೆಯಾಗಿದ್ದು ತಹಶೀಲ್ದಾರ್!”

ನಿಮ್ಮ ತಂದೆ ಕೂಡ ಪಂಚೆ ಉಡುವವರಾಗಿರಬಹುದು, ನಿಮ್ಮಂತಹ ಮಗನ ಬಗ್ಗೆ ಅವರೇನು ತಿಳಿಯಬಹುದು? | ಸಿ.ಟಿ.ರವಿಗೆ ಸಿದ್ದು ಗುದ್ದು

ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ತಂದೆಗೆ ವಿಷಯ ಹೇಳುತ್ತೇನೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ

ಕೃಷ್ಣನ ಚಕ್ರ, ಟಿಪ್ಪುವಿನ ಸಿಂಹಾಸನ ಮಾರಾಟ ಮಾಡಿದ ಆರೋಪಿ ಅರೆಸ್ಟ್!

ಇತ್ತೀಚಿನ ಸುದ್ದಿ