ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮಸೀದಿಯ ಗೋಪುರ ತೆರವು
20/08/2022
ಮೈಸೂರು: ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮಸೀದಿಯ ಎರಡು ಗೋಪುರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಇರ್ವಿನ್ ರಸ್ತೆಯ ಮಸೀದಿಯ ಗೋಪುರ ತೆರವು ಮಾಡಲಾಗಿದೆ. ಮಾತುಕತೆಯ ಮೂಲಕ ಗೋಪುರವನ್ನು ತೆರವುಗೊಳಿಸಲಾಗಿದೆ. ಮಸೀದಿ ಆಡಳಿತ ಮಂಡಳಿ ಜೆಸಿಬಿ ಮೂಲಕ ಗೋಪುರ ಕೆಡವಿದೆ ಎಂದು ತಿಳಿದು ಬಂದಿದೆ.
ರಸ್ತೆ ಅಗಲೀಕರಣಕ್ಕೆ ಮಸೀದಿಯ ಎರಡು ಗೋಪುರ ಅಡ್ಡಿಯಾಗಿತ್ತು. ಹೈಕೋರ್ಟ್ ಸಹ ಗೋಪುರ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಸದ್ಯ ಗೋಪುರ ತೆರವುಗೊಳಿಸಲು ಮಸೀದಿ ಆಡಳಿತ ಒಪ್ಪಿದ್ದು ತಾವೇ ಮುಂದೆ ನಿಂತು ಗೋಪುರ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka