ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಡೆ ಬೇಲಿ ಹತ್ತಿ ಕುಳಿತು ಕೊಂಡ ಕಾರು!
25/06/2021
ಮಂಡಿ: ಕಾರೊಂದು ಮೂರಡಿ ಎತ್ತರದ ರಸ್ತೆಯ ತಡೆಗೋಡೆ ಮೇಲೆ ಹತ್ತಿನಿಂತ ಘಟನೆ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್ ಬಳಿಯಲ್ಲಿ ನಡೆದಿದೆ. ಈ ಪ್ರದೇಶಗಳಲ್ಲಿ ನಡೆಯುತ್ತಿರುವ ಅಪಘಾತಗಳು ಯಾವಾಗಲೂ ವಿಚಿತ್ರವಾಗಿ ಕಂಡು ಬರುತ್ತದೆ.
ಮೂರು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಕಾರೊಂದು ರಸ್ತೆಯಿಂದ ಐದು ಮೀಟರ್ ದೂರವಿರುವ ಮನೆಯೊಂದರ ಛಾವಣಿ ಮೇಲೆ ಕುಳಿತಿತ್ತು. ಬುಧವಾರ ಇಂತಹದ್ದೇ ಅಪಘಾತ ನಡೆದಿದ್ದು, ಕಾರೊಂದು ರಸ್ತೆಯ ತಡೆಗೋಡೆಯ ಮೇಲೆ ಹೋಗಿ ಕುಳಿತಿದೆ.
ಇನ್ನೂ ಘಟನೆ ನಡೆಯುವ ಸಂದರ್ಭದಲ್ಲಿ ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು ಎನ್ನಲಾಗಿದೆ. ಜಬೋತ್ ಸೇತುವೆ ಮೇಲೆ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಡೆ ಬೇಲಿಯ ಮೇಲೆ ಹೋಗಿ ನಿಂತಿದೆ.