ರಥಕ್ಕೆ ವಿದ್ಯುತ್ ತಂತಿ ತಗುಲಿ; 11 ಮಂದಿ ಸಾವು
ರಥ ಎಳೆಯುವ ವೇಳೆ ವಿದ್ಯುತ್ ಶಾಕ್ ತಗುಲಿ 11 ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಂಜಾವೂರು ಎಂಬಲ್ಲಿ ನಡೆದಿದೆ.
ತಂಜಾವೂರಿನ ಕಾಳಿಮೇಡು ದೇವಸ್ಥಾನದ ಚಿತಿರಾ ಮಹೋತ್ಸವದ ರಥ ನಡೆದಿದ್ದು,ಈ ವೇಳೆ ರಥ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
94ನೇ ಅಪ್ಪರ್ ಗುರುಪೂಜೆಗೆ ಸಾಕಷ್ಟು ಮಂದಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ನಗರದಲ್ಲಿ ರಥ ಎಳೆಯುತ್ತಿದ್ದ ಸಂದರ್ಭದಲ್ಲಿ ರಥವು ವಿದ್ಯುತ್ ತಂತಿಗೆ ಸಿಲುಕಿದ ಪರಿಣಾಮ ವಿದ್ಯುತ್ ಶಾಕ್ ತಗುಲಿ ರಥದಲ್ಲಿದ್ದ ಹತ್ತು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಥಕ್ಕೆ ವಿದ್ಯುತ್ ಸ್ಪರ್ಶವಾಗಿದ್ದ ತಕ್ಷಣ ರಥದ ಸುತ್ತಮುತ್ತ ನೆರೆದಿದ್ದ ಜನರು ಭಯದಿಂದ ದೂರ ಓಡಿದ್ದು ಭಾರಿ ಅನಾಹುತ ತಪ್ಪಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನರ್ಸ್ ನ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು!: ತಾಯಿಯ ಕಣ್ಣಮುಂದೆಯೇ ಘಟನೆ
ಇಫ್ತಾರ್ ಕೂಟದಲ್ಲಿ ಟೋಪಿ ಧರಿಸಲು ಹಿಂದೇಟು ಹಾಕಿದ ಪ್ರಜ್ವಲ್ ರೇವಣ್ಣ!
ತಕರಾರು ಯಾಕೆ ನೀವೇ ಸಿಎಂ ಆಗಿ ಬಿಡಿ ಎಂದ ಯತ್ನಾಳ್: ನಕ್ಕ ಬಸವರಾಜ್ ಬೊಮ್ಮಾಯಿ
ಮೂರನೇ ವಿಶ್ವ ಯುದ್ದದ ಎಚ್ಚರಿಕೆ ನೀಡಿದ ರಷ್ಯಾ
66ನೇ ವಯಸ್ಸಿನಲ್ಲಿ ಎರಡನೇ ವಿವಾಹಕ್ಕೆ ಸಿದ್ಧವಾದ ಮಾಜಿ ಕ್ರಿಕೆಟಿಗ!