ಹೆಲಿಕಾಪ್ಟರ್ ನಲ್ಲಿ ಚಾಮರಾಜನಗರಕ್ಕೆ ಬಂದಿಳಿದ ಉದ್ಯಮಿ ವೇಣು ಶ್ರೀನಿವಾಸನ್
ಚಾಮರಾಜನಗರ: ಟಿ.ವಿ.ಸುಂದರಂ ಅಂಡ್ ಸನ್ಸ್(ಟಿವಿಎಸ್) ಕಂಪನಿಯ ಚೇರ್ಮನ್ ವೇಣು ಶ್ರೀನಿವಾಸನ್ ಚಾಮರಾಜನಗರಕ್ಕೆ ಆಗಮಿಸಿದ್ದು ತಮ್ಮ ಒಡೆತನದಲ್ಲಿರುವ ಬೇಡಗುಳಿ ಕಾಫಿ ಎಸ್ಟೇಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಅವರು ಖಾಸಗಿ ಅಂಗರಕ್ಷಕರೊಂದಿಗೆ ಬೇಡಗುಳಿ ಎಸ್ಟೇಟ್ ಗೆ ತೆರಳಿದ್ದಾರೆ.
ಒಂದು ವಾರಗಳ ಎಸ್ಟೇಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲೇ ಈ ಎಸ್ಟೇಟ್ ಇದ್ದು ಪ್ರಕೃತಿ ಸೌಂದರ್ಯದ ಮುಕುಟಮಣಿಯಂತೆ ಸದಾ ಹಸಿರಿನಿಂದ ಕಂಗೊಳಿಸುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw