ಏಪ್ರಿಲ್ 10ರಿಂದ 20ರವರೆಗೆ ರಾತ್ರಿ 10 ಗಂಟೆಯಿಂದ “ಕೊರೊನಾ ಟೈಮ್” | ನೈಟ್ ಕರ್ಫ್ಯೂ ನಲ್ಲಿ ಏನೇನು ಇರುತ್ತೆ? - Mahanayaka

ಏಪ್ರಿಲ್ 10ರಿಂದ 20ರವರೆಗೆ ರಾತ್ರಿ 10 ಗಂಟೆಯಿಂದ “ಕೊರೊನಾ ಟೈಮ್” | ನೈಟ್ ಕರ್ಫ್ಯೂ ನಲ್ಲಿ ಏನೇನು ಇರುತ್ತೆ?

covid 19
09/04/2021

ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ 10ರಿಂದ 20ರವರೆಗೆ ರಾತ್ರಿ 10 ಗಂಟೆಯಿಂದ  ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ.

ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ತುಮಕೂರು, ಕಲಬುರಗಿ ಜಿಲ್ಲೆಗಳಲ್ಲಿ ನಗರಕ್ಕೆ ಮಾತ್ರ ಸೀಮಿತವಾಗುತವಂತೆ ಇದು ಜಾರಿಯಾಗಲಿ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಒಟ್ಟು 10 ದಿನಗಳ ಕಾಲ ನಡೆಯುವ ಈ ರಾತ್ರಿ ಕರ್ಫ್ಯೂ ಸಮಯದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೊಥೆಕ್, ಪಬ್, ಕ್ಲಬ್‍ ಗಳು, ಗಾರ್ಮೆಂಟ್ಸ್, ಕೈಗಾರಿಕೆಗಳು, ಹೋಟೆಲ್‍ ಗಳು, ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ಔತಣಕೂಟಗಳು, ಹಾರ್ಡ್‍ವೇರ್, ಮಾಲ್‍ಗಳು, ಮಾರುಕಟ್ಟೆ, ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳು ಸಂಪೂರ್ಣ ಮುಚ್ಚಲು ಆದೇಶಿಸಲಾಗಿದೆ.

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು, ಕಂಪೆನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರು ಇರಬೇಕು ಎಂದು ಸರ್ಕಾರ ಹೇಳಿದೆ.

ರಾಜ್ಯ ಸರ್ಕಾರ ಕೊರೊನಾವನ್ನು ಗೂಬೆ ಎಂದು ಅಂದುಕೊಂಡಿದೆಯೋ ಗೊತ್ತಿಲ್ಲ. ಆದರೆ ರಾತ್ರಿ ಹೊತ್ತು ಮಾತ್ರ ಕರ್ಫ್ಯೂ ಮಾಡಲು ಹೊರಟಿದೆ. ರಾತ್ರಿ 10ರಿಂದ ಬೆಳಗ್ಗೆ 5ಗಂಟೆಯ ವರೆಗೆ ಕೊರೊನಾ ರಸ್ತೆಯಲ್ಲಿ ಓಡಾಡುತ್ತದೆ ಎಂದೇ ಹಳ್ಳಿಯಲ್ಲಿ ಜನರು ಕೂಡ ಭಾವಿಸುವಂತಾಗಿದೆ.

ಕೊರೊನಾ ಮಿತಿ ಮೀರುತ್ತಿದ್ದರೆ ರಾಜ್ಯ ಸರ್ಕಾರ, ಜನರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಿ. ಆದರೆ, ಸರ್ಕಾರಕ್ಕೆ ಇನ್ನು ಲಾಕ್ ಡೌನ್ ಮಾಡುವ ಸಾಮರ್ಥ್ಯವಿಲ್ಲ ಹೀಗಾಗಿ ನೈಟ್ ಕರ್ಫ್ಯೂ ಎಂಬ ಲಾಜಿಕ್ಕೇ ಇಲ್ಲದ ಜಾಗೃತಿ ಕಾರ್ಯಕ್ರಮವನ್ನು ಸರ್ಕಾರ ಮಾಡುತ್ತಿದೆ ಎಂಬ ಮಾತುಗಳು ಮತ್ತೆ ಮತ್ತೆ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ