2 ವರ್ಷದ ಮಗುವಿನ ಚಿಕಿತ್ಸೆಗಾಗಿ ಈ ಬಾರಿ 'ಸೀ ಪೋಕ್' ವೇಷದ ಮೂಲಕ‌ ರಂಜಿಸಲಿದ್ದರೆ ರವಿ ಕಟಪಾಡಿ - Mahanayaka

2 ವರ್ಷದ ಮಗುವಿನ ಚಿಕಿತ್ಸೆಗಾಗಿ ಈ ಬಾರಿ ‘ಸೀ ಪೋಕ್’ ವೇಷದ ಮೂಲಕ‌ ರಂಜಿಸಲಿದ್ದರೆ ರವಿ ಕಟಪಾಡಿ

ravi katpadi
05/09/2023

ಉಡುಪಿ: ವಿಶಿಷ್ಟ ವೇಷ ಧರಿಸಿ ಜನರನ್ನು ರಂಜಿಸುತ್ತಿದ್ದ ಸಮಾಜ ಸೇವಕ ರವಿ ಕಟಪಾಡಿ ಅವರು, ಈ ಬಾರಿ ವಿಶಿಷ್ಟ ವೇಷದೊಂದಿಗೆ ಜನರನ್ನು ರಂಜಿಸಲು ಸಜ್ಜಾಗಿದ್ದಾರೆ. ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಹಾಕಿ ತಿರುಗಾಟ ನಡೆಸಲಿದ್ದಾರೆ.

ಪ್ರತಿ ವರ್ಷ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವೇಷ ಧರಿಸುತ್ತಿದ್ದ ರವಿ ಕಟಪಾಡಿ ಅವರು, ಈ ಬಾರಿಯು ಅದನ್ನು ಮುಂದುವರಿಸಿದ್ದಾರೆ. ಕುಂದಾಪುರದ 2 ವರ್ಷದ ಮಗುವಿನ ಚಿಕಿತ್ಸೆಗಾಗಿ ಹಣ ಸಂಗ್ರಹ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಈ ಬಾರಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ಜನರ ಬಳಿಗೆ ಹೋಗಿ ಬಾಕ್ಸ್ ಗಳನ್ನು ಹಿಡಿದು ಹಣವನ್ನು ಸಂಗ್ರಹ ಮಾಡದೇ ಇರಲು ತೀರ್ಮಾನಿಸಿದೆ.


ADS

ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಕಟಪಾಡಿ ಅವರು, ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ತಮ್ಮ ಫ್ರೆಂಡ್ಸ್ ತಂಡ ತಿರುಗಾಟ ನಡೆಸಲಿದೆ‌‌. ಈ ಬಾರಿ ವೇಷ ಹಾಕಿದರೂ ಕೂಡಾ ಜನರ ಬಳಿಗೆ ತೆರಳಿ ಬಾಕ್ಸ್ ನಲ್ಲಿ ಹಣ ಸಂಗ್ರಹ ಮಾಡುವುದಿಲ್ಲ. ಬದಲಾಗಿ ಯಾರಿಗಾದರೂ ನಮ್ಮ ಉದ್ದೇಶಕ್ಕೆ ಸಹಕಾರ ನೀಡಲು ಇಚ್ಛಿಸಿದ್ದಲ್ಲಿ ನಮ್ಮ ವಾಹನದ ಬಳಿಗೆ ಬಂದು ತಮ್ಮ ಧನಸಹಾಯವನ್ನು ನೀಡಬಹುದು ಎಂದರು.

ಇತ್ತೀಚಿನ ಸುದ್ದಿ