ಚಿನ್ನದ ಪದಕ ವಿಜೇತ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ ಕೊರೊನಾಕ್ಕೆ ಬಲಿ - Mahanayaka
10:21 PM Wednesday 12 - March 2025

ಚಿನ್ನದ ಪದಕ ವಿಜೇತ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ ಕೊರೊನಾಕ್ಕೆ ಬಲಿ

ravindra pal singh
08/05/2021

ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಅವರು ಕೊರೋನಾ ಸೋಂಕಿನಿಂದ ನಿಧನ ಹೊಂದಿದ್ದಾರೆ. ಶುಕ್ರವಾರ ಏಕಾಏಕಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರವೀಂದರ್ ಪಾಲ್ ಅವರನ್ನು ಏಪ್ರಿಲ್ 24 ಹರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಶುಕ್ರವಾರ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು ಕೂಡಲೇ ಅವರಿಗೆ ವೆಂಟಿಲೇಟರ್‌ ಅಳವಡಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಸಿಂಗ್ ಅವಿವಾಹಿತರಾಗಿದ್ದು, ಸೋದರ ಸೊಸೆ, ಪ್ರಜ್ಞಾ ಯಾದವರನ್ನು ಅಗಲಿದ್ದಾರೆ. ಸಿಂಗ್ ಅವರು 1979 ರ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದರು ಹಾಗೂ ಹಾಕಿಯಿಂದ ನಿವೃತ್ತಿಯಾದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರಿಯಿಂದಲೂ ಸ್ವಯಂಪ್ರೇರಿತರಾಗಿ ನಿವೃತ್ತರಾಗಿದ್ದರು. 1979 ರಿಂದ 1984 ರವರೆಗೆ ಎರಡು ಒಲಿಂಪಿಕ್ಸ್ ನಲ್ಲಿ ಆಡಿದ್ದರು.


Provided by

ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ (1980, 1983 ) ಹಾಂಕಾಂಗ್‌ನಲ್ಲಿ ನಡೆದ ಸಿಲ್ವರ್ ಜುಬಿಲಿ 10 ರಾಷ್ಟ್ರಗಳ ಕಪ್, 1982 ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಹಾಗೂ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಸೇರಿದಂತೆ ಇತರ ಪಂದ್ಯಾವಳಿಗಳಲ್ಲಿ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

ಇತ್ತೀಚಿನ ಸುದ್ದಿ