ರವಿಶಂಕರ್ ಗುರೂಜಿ ಆಶ್ರಮದವರಿಗೇ ಮಂಕುಬೂದಿ ಎರಚಿ ವಂಚಿಸಿದ ನಕಲಿ ಐಎಎಸ್ ಅಧಿಕಾರಿ!

shishir balasaheb
08/09/2021

ರಾಮನಗರ: ತಾನು ವಿಶೇಷ ಐಎಎಸ್ ಅಧಿಕಾರಿ ಎಂದು ನಂಬಿಸಿದ ವ್ಯಕ್ತಿಯೋರ್ವ ರವಿಶಂಕರ್ ಗುರೂಜಿ ಆಶ್ರಮ ಸೇರಿದಂತೆ ಹಲವರಿಗೆ ವಂಚಿಸಿದ್ದು, ಕಗ್ಗಲೀಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಮಹಾರಾಷ್ಟ್ರ ಮೂಲದವನು ಎಂದು ತಿಳಿದು ಬಂದಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಸಾಲುಹುಣಸೆ ಪ್ರದೇಶ ನಿವಾಸಿ 24 ವರ್ಷ ವಯಸ್ಸಿನ ಶಿಶಿರ್ ಬಾಳಾಸಾಹೇಬ್  ಬಂಧಿತ ವ್ಯಕ್ತಿಯಾಗಿದ್ದು, ಈತ ಮೂಲತಃ ಮಹಾರಾಷ್ಟ್ರದ ಜಲಗಾವ್ ಜಿಲ್ಲೆಯವನಾಗಿದ್ದಾನೆ ಎಂದು ಹೇಳಲಾಗಿದೆ. ಡಿಪ್ಲೋಮಾ ಪದವೀಧರನಾಗಿದ್ದ ಈತ ಬೆಂಗಳೂರಿನಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ.

ನಿರುದ್ಯೋಗಿಯಾಗಿದ್ದ ಶಿಶಿರ್ ತಾನು ಕೇಂದ್ರ ಗೃಹ ಇಲಾಖೆಯಲ್ಲಿ ಐಎಎಸ್ ಅಧಿಕಾರಿಯಾಗಿದ್ದು, ದಕ್ಷಿಣ ವಲಯದ ವಿಶೇಷ ಕರ್ತವ್ಯ ಅಧಿಕಾರಿ ಎಂದು ನಕಲಿ ಐಡಿ ತೋರಿಸಿ, ರವಿಶಂಕರ್ ಗುರೂಜಿ ಆಶ್ರಮದವರಿಗೇ ಮಂಕು ಬೂದಿ ಎರಚಿದ್ದ.

ಆರೋಪಿಯು ಆಶ್ರಮಕ್ಕೆ ಸೇರಿದ ಸಿವಿಲ್ ವ್ಯಾಜ್ಯಗಳನ್ನು ಪರಿಹರಿಸಿಕೊಡುವುದಾಗಿ ಹೇಳಿ ಆಶ್ರಮದವರಿಂದ ಹಣಪಡೆದಿದ್ದ ಎಂದು ಹೇಳಲಾಗಿದೆ. ಸದ್ಯ ಬಂಧಿತನಿಂದ ಒಂದು ಇನೋವಾ ಕ್ರಿಸ್ಟಾ ಕಾರು, ನಕಲಿ ಐಡಿ ಹಾಗೂ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡು ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಲಾರಿ | ಕಾರಿನಲ್ಲಿದ್ದ ಇಬ್ಬರ ದುರಂತ ಸಾವು

12 ವರ್ಷದ ಬಾಲಕಿಯ ಮೇಲೆ ಮಲತಂದೆ, ನೆರೆ ಮನೆಯ ವ್ಯಕ್ತಿಯಿಂದ ಅತ್ಯಾಚಾರ!

ನಿಶ್ಚಿತಾರ್ಥವಾದ ಬೆನ್ನಲ್ಲೇ ಗಂಡಿಗೆ ಶಾಕ್ ನೀಡಿದ ಯುವತಿ | ಚಿನ್ನಾಭರಣದೊಂದಿಗೆ ಪರಾರಿ, ತಾಯಿಗೂ ಟೋಪಿ ಹಾಕಿದ ಮಗಳು!

ಪ್ರೀತಿಸಿ ವಿವಾಹವಾಗಿದ್ದವರನ್ನು ಜಾತಿಗಾಗಿ ಬೇರ್ಪಡಿಸಿದರು! | ಫೇಸ್ ಬುಕ್ ಲೈವ್ ಗೆ ಬಂದು ಯುವಕ ಆತ್ಮಹತ್ಯೆ

ಡ್ರಗ್ಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು? | ರೂಮ್ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದಳು ಎಂದ ಕಿಶೋರ್ ಶೆಟ್ಟಿ?

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ ಐ ಅರ್ಜುನ್ ಗೆ ಜೈಲೇ ಗತಿ

ಮಹಿಳೆಯನ್ನು ಕೊಂದು ಅಡುಗೆ ಮನೆಯಲ್ಲಿಯೇ ಸುಟ್ಟ ಲಿವ್ ಇನ್ ಪಾಟ್ನರ್!

ಇತ್ತೀಚಿನ ಸುದ್ದಿ

Exit mobile version