ಆನ್ ಲೈನ್ ಸಾಲ ಪಡೆಯುತ್ತಿದ್ದೀರಾ?: ಆರ್ ಬಿ ಐ ನೀಡಿದ ಸಲಹೆ ಏನು ಗೊತ್ತಾ?

24/12/2020

ಹೊಸದಿಲ್ಲಿ: ಅನಧಿಕೃತ ಸಾಲ ವಿತರಣೆ ವೇದಿಕೆಗಳು ಹಾಗೂ ಮೊಬೈಲ್ ಆ್ಯಪ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಜನತೆಗೆ ಸಲಹೆ ನೀಡಿದೆ.

ಶೀಘ್ರವಾಗಿ ಅಡೆತಡೆ ಮುಕ್ತ ಸಾಲ ಒದಗಿಸುವ ಆಮಿಷವೊಡ್ಡಿ ವಂಚಿಸುತ್ತಿರುವ ಆನ್ ಲೈನ್ ಸಾಲ ವಿತರಣ ವೇದಿಕೆಗಳು ಮತ್ತು ಆ್ಯಪ್ ಗಳ ಬಗ್ಗೆ ತನಗೆ ದೂರು ಬಂದಿದೆ ಎಂದು  ಆರ್ ಬಿ ಐ ಬುಧವಾರ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ  ತಿಳಿಸಿದೆ.

ಇಂತಹ ಆಮಿಷ, ವಂಚನೆಗಳ ಕುರಿತು  ಜನರು ಎಚ್ಚರಿಕೆ ವಹಿಸಬೇಕು.  ಈ ರೀತಿಯ ಲಿಂಕ್ ಗಳನ್ನು ಕ್ಲಿಕ್ ಮಾಡುವ ಮೊದಲು ಅದರ ಸತ್ಯಾಸತ್ಯತೆಗಳನ್ನು ತಿಳಿದು ಮುಂದುವರಿಯಬೇಕು  ಎಂದು ಆರ್ ಬಿಐ ಸಲಹೆ ನೀಡಿದೆ.

ಇತ್ತೀಚಿನ ಸುದ್ದಿ

Exit mobile version