ಎಲ್ಲ ವಿದ್ಯಾರ್ಥಿಗಳು ಪಾಸ್, ಶಿಕ್ಷಣ ಸಚಿವರು ಫೇಲ್! | ರಿ ಎಕ್ಸಾಮ್ ಬರೀತಾರಾ ಸುರೇಶ್ ಕುಮಾರ್?
ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಕೈ ಬಿಡಲಾಗಿದ್ದು, ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವ ಸುರೇಶ್ ಕುಮಾರ್, ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟ ರಚನೆಯ ಬಳಿಕ, ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಸುರೇಶ್ ಕುಮಾರ್ ಆರ್.ಟಿ. ನಗರದಲ್ಲಿ ಭೇಟಿಯಾಗಿ ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಸಿಎಂ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದ ಸುರೇಶ್ ಕುಮಾರ್ ಅವರು, ಕೊವಿಡ್ ಸಂದರ್ಭದಲ್ಲಿ ಕೊವಿಡ್ ನಿರ್ವಹಣೆ ಜವಾಬ್ದಾರಿಯನ್ನು ಕೂಡ ಹೊತ್ತಿದ್ದರು. ಇನ್ನೂ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ಪಾಸ್ ಎಂದು ಘೋಷಿಸಿದ ಬೆನ್ನಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿತ್ತು. ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿದೆ.
ಸುರೇಶ್ ಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದರ ಬೆನ್ನಲ್ಲೇ ಅವರನ್ನು ಟ್ರೋಲ್ ಮಾಡಲಾಗಿದ್ದು, “ಎಲ್ಲ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ, ಆದರೆ, ಶಿಕ್ಷಣ ಸಚಿವರು ಫೇಲ್ ಆಗಿದ್ದಾರೆ” ಎಂಬ ಟ್ರೋಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿ ಹೈಕಮಾಂಡ್ ಸುರೇಶ್ ಕುಮಾರ್ ಅವರನ್ನು ಸಂಪುಟ ಪರೀಕ್ಷೆಯಲ್ಲಿ ಫೇಲ್ ಮಾಡಿದ್ದು, ಅವರು ಸಿಎಂ ಅವರನ್ನು ಭೇಟಿ ಮಾಡುವ ಮೂಲಕ ರೀ ಎಕ್ಸಾಮ್ ಬರೆದು ಸಚಿವ ಸಂಪುಟ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರಾ? ಎನ್ನುವ ಕುತೂಹಲದ ಮಾತುಗಳು ಇದೀಗ ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಅನಾಥನಾಗಿದ್ದ | ಬಿಜೆಪಿ ಸೇರ್ಪಡೆಗೆ ಎನ್.ಮಹೇಶ್ ಪ್ರತಿಕ್ರಿಯೆ
“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ
ಬಿಗ್ ನ್ಯೂಸ್: ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್
“ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ”
ತನ್ನ ವಿರುದ್ಧದ ವರದಿ ಪ್ರಕಟಿಸದಂತೆ ನ್ಯೂಸ್ ಫಸ್ಟ್ ಗೆ ತಡೆಯಾಜ್ಞೆ ತಂದ ಸಚಿವೆ ಜೊಲ್ಲೆ